ಒಂದು ಕಾಲದಲ್ಲಿ ತನ್ನ ಅದ್ಬುತ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ ಡೈನಾಮಿಕ್ ಹೀರೋ ದೇವರಾಜ್ ಈಗ ಕೆಲವು ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗಂತ ಇವರು ಬರೀ ಅತಿಥಿ ಪಾತ್ರಗಳಿಗಷ್ಟೇ ಅಂಟಿಕೊಂಡಿಲ್ಲ. ಅವರು ನಾಯಕರಾಗಿ ನಟಿಸಿರುವ ಮೇಷ್ಟ್ರು ಚಿತ್ರ ಮುಕ್ತಾಯದ ಹಂತದ ತಲುಪಿದೆ.
ಈ ನಡುವೆ ವಿಷ್ಣುವರ್ಧನ್ ನಟಿಸಿರುವ 'ಸ್ಕೂಲ್ ಮೇಷ್ಟ್ರು' ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಸುದೀಪ್ ಅಭಿನಯದ ವೀರ ಮದಕರಿ ಚಿತ್ರದಲ್ಲಿ ಉನ್ನತ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ದೇವರಾಜ್‌ಗೆ ಪೊಲೀಸ್ ಅಧಿಕಾರಿಯ ಪಾತ್ರ ಸೂಟ್, ಆದರೆ ಬೇರೆ ಪಾತ್ರಗಳು ಸೂಟ್ ಆಗುವುದಿಲ್ಲ. ಹಿಂದೆ ಇವರ ಪೊಲೀಸ್ ಪಾತ್ರಗಳು ಯಶಸ್ವಿಯಾದಷ್ಟು ಬೇರೆ ಪಾತ್ರಗಳು ಯಶಸ್ವಿಯಾಗಿಲ್ಲ.
ಈಗ ಸಿಗುವ ಹೆಚ್ಚಿನ ಅತಿಥಿ ಪಾತ್ರಗಳು ಕೂಡಾ ಅವರ ಮ್ಯಾನರಿಸಂಗೆ ಸೂಟ್ ಆಗುವಂತಿವೆ. ಒಂದೆಡೆ ಸಿಕ್ಸರ್ ಚಿತ್ರದ ಮೂಲಕ ನಾಯಕನಾದ ದೇವರಾಜ್ ಅವರ ಮಗ ಪ್ರಜ್ವಲ್ ಈಗ ಚಿತ್ರರಂಗದಲ್ಲಿ ಸದಾ ಬ್ಯುಸಿ ನಟ. ಅವರ ಅಭಿನಯದ ಗುಲಾಮ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗಿನ ಅವರ ಮೆರವಣಿಗೆ ಚಿತ್ರ ನಿರೀಕ್ಷಿತ ಗೆಲುವು ಸಾಧಿಸಲಿಲ್ಲ.