ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒಲವೇ ಮಂದಾರದಲ್ಲಿ ದೇವಾ ರೀ ಎಂಟ್ರಿ
ಸುದ್ದಿ/ಗಾಸಿಪ್
Feedback Print Bookmark and Share
 
ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಲ್ಲೊಬ್ಬರಾದ ದೇವಾ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಕೆ. ಗೋವಿಂದರಾಜ್ ನಿರ್ಮಾಣದ ಹಾಗೂ ಜಯತೀರ್ಥ ನಿರ್ದೇಶನದ ಒಲವೇ ಮಂದಾರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಈ ಚಿತ್ರಕ್ಕೆ ಆಕಾಶ್ ಆಡಿಯೋನಲ್ಲಿ ಧ್ವನಿಮುದ್ರಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಕೆ.ವಿ.ರಾಜು, ಹಂಸಲೇಖ, ಕಲ್ಯಾಣ್, ಜಯಂತ್ ಕಾಯ್ಕಣಿ, ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಶ್ರೀಕಾಂತ್, ಆಕಾಂಕ್ಷ, ನಾಜರ್, ರಂಗಾಯಣ ರಘು, ಶರಣ್, ಕೋಮಲ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ಮತ್ತೊಬ್ಬ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಇಳೆಯರಾಜ ಕೂಡಾ ಪ್ರೇಮ್ ಕಹಾನಿ ಹಾಗೂ ಸರಿಗಮ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಒಲವೇ ಮಂದಾರ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೇವಾ ಒಲವೇ ಮಂದಾರ ಜಯತೀರ್ಥ