ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾರಿ, ಮಳೆಯಲ್ಲಿ ನೆನೆಯೋಲ್ಲಾ-ರಮ್ಯಾ
ಸುದ್ದಿ/ಗಾಸಿಪ್
Feedback Print Bookmark and Share
 
ನಟಿ ರಮ್ಯಾ ಮಳೆಯಲ್ಲಿ ನೆನೆಯುವ ದೃಶ್ಯವಿದ್ದರೆ ಖುಷಿಯಿಂದ ರೆಡಿಯಾಗಿರುತ್ತಾರೆ. ಇವರಿಗೆ ಮಳೆಯಲ್ಲಿ ನೆನೆಯುವುದೆಂದರೆ ತುಂಬಾ ಇಷ್ಟವಂತೆ. ಆದರೆ ಇತ್ತೀಚೆಗೆ ಉಲ್ಲಾಸ ಚಿತ್ರೀಕರಣದ ವೇಳೆ ಮಳೆಯಲ್ಲಿ ನೆನೆಯುವ ದೃಶ್ಯವಿದ್ದಾಗ ಮಾತ್ರ ರಮ್ಯಾ, ಸಾರಿ, ನನ್ನಿಂದ ಇವತ್ತಾಗಲ್ಲ ಎಂದರಂತೆ.

ಇದನ್ನು ಕೇಳಿದ ಚಿತ್ರತಂಡದವರಿಗೆ ಒಮ್ಮೆಲೇ ಆಶ್ವರ್ಯವಾಗಿದೆ. ಯಾವತ್ತೂ ಮಳೆ ದೃಶ್ಯ ಎಂದರೆ ಖುಷಿಯಿಂದಿರುವ ನಮ್ಮ ನಾಯಕಿ ಇವತ್ಯಾಕೆ ಹೀಗೆ.. ಎಂದು ತಲೆ ಬಿಸಿ ಮಾಡಿಕೊಂಡರು. ಆದರೆ ರಮ್ಯಾಗೆ ಆ ದಿವಸ ತುಂಬಾ ಜ್ವರ ಇತ್ತಂತೆ.
MOKSHENDRA

"ನನಗೆ ಜ್ವರ ಬರುತ್ತಿತ್ತು. ಈ ನಡುವೆ ಮಳೆಯಲ್ಲಿ ನೆನೆದರೆ ಮತ್ತೆ ಅಷ್ಟೇ. ಅದಕ್ಕಾಗಿ ನೋ ಎಂದೆ. ಆರೋಗ್ಯ ಸರಿಯಿದ್ದರೆ ತಾನೇ ಚಿತ್ರೀಕರಣ" ಎಂದು ತಾವು ನೋ ಎಂದಿದ್ದಕ್ಕೆ ಸಮಜಾಯಿಷಿ ನೀಡಿದರು ರಮ್ಯಾ. ಈಗ ರಮ್ಯಾ ವರ್ಷಕ್ಕೆ ಎರಡು ಚಿತ್ರಗಳಲ್ಲಿ ಮಾತ್ರ ನಟಿಸಲು ತೀರ್ಮಾನಿಸಿದ್ದಾರೆ. ಸಿಕ್ಕ ಚಿತ್ರಗಳೆಲ್ಲ ನಟಿಸಿ ಪ್ರೇಕ್ಷಕರಿಂದ ದೂರವಾಗುವುದಕ್ಕಿಂತ ಒಂದೆರಡು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಮುಟ್ಟುವುದು ಉತ್ತಮವಲ್ಲವೇ ಎನ್ನುತ್ತಾರೆ ಈ ಬೆಡಗಿ.

ಅಂದ ಹಾಗೆ ಈ ಚಿತ್ರಾನ್ನ ಬೇಬಿ ರಮ್ಯಾ ಆಲಿಯಾಸ್ ಸ್ಪಂದನಾಗೆ ಚಿತ್ರಾನ್ನವೆಂದರೆ ಪಂಚಪ್ರಾಣವಂತೆ. ದಿನದ ಮೂರು ಹೊತ್ತು ಚಿತ್ರಾನ್ನ ಕೊಟ್ಟರೂ ತಿನ್ನುತ್ತಾರಂತೆ. ಅದರಲ್ಲೂ ಇವರ ಅಮ್ಮ ಮಾಡಿದ ಚಿತ್ರಾನ್ನದ ಟೇಸ್ಟೇ ಬೇರೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಲ್ಲಾಸ ರಮ್ಯಾ