ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವೆಂಕಿ ಧ್ವನಿ ಸುರುಳಿ ಬಿಡುಗಡೆ
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರಶಾಂತ್ ನಾಯಕರಾಗಿ ನಟಿಸಿದ ವೆಂಕಿ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ಭಾರ್ಗವ ಧ್ವನಿಸುರುಳಿ ಬಿಡುಗಡೆ ಮಾಡಿದರು. ಪ್ರಶಾಂತ್ ಅವರ ಮೂರನೇ ಸಿನಿಮಾವಾದ್ದರಿಂದ ಸಹಜವಾಗಿಯೇ ಅವರು ತುಂಬಾ ಸಂತಸದಲ್ಲಿದ್ದರು. ಸಂಗೀತ ನಿರ್ದೇಶಕರು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ ಎಂದರು.

ನಾಲ್ವರು ಬ್ರಹ್ಮಚಾರಿ ಹುಡುಗರು ಹೇಗಿರುತ್ತಾರೆ ಎಂಬುದು ಸಿನಿಮಾದ ಕಥೆಯಂತೆ. ನಿರ್ಮಾಪಕ ಸೂರ್ಯಕಾಂತ್ ಸಿನಿಮಾವನ್ನು ಪ್ರೀತಿಸಿದ್ದಾರೆ. ಪ್ರತಿಯೊಂದನ್ನೂ ವಿಚಾರಿಸಿ ಬೇಕಾದುದ್ದನ್ನು ಕೊಟ್ಟಿದ್ದಾರೆ ಎಂದು ನಿರ್ಮಾಪಕರನ್ನು ಬಾಯ್ತುಂಬ ಹೊಗಳಿದರು ಪ್ರಶಾಂತ್.

ನನ್ನೊಂದಿಗೆ ಕೆಲಸ ಮಾಡಿದ ನನ್ನ ಎಲ್ಲ ಸಹನಿರ್ದೇಶಕರು ನಿರ್ದೇಶಕರಾಗಿದ್ದಾರೆ. ಇದು ತುಂಬಾ ಸಂತೋಷದ ವಿಷಯ. ಸಿನಿಮಾ ಕಥೆ ಕುತೂಹಲಕಾರಿಯಾಗಿದೆ ಎಂದರು ಹಿರಿಯ ನಿರ್ದೇಶಕ ಭಾರ್ಗವ್. ವೆಂಕಿ ನಿರ್ದೇಶಕ ಮಾಧವ್, ಭಾರ್ಗವ್ ಅವರ ಶಿಷ್ಯ. ಸಂಗೀತ ನಿರ್ದೇಶಕ ನೀಲ್ ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಶಾಂತ್ ಭಾರ್ಗವ ವೆಂಕಿ ಮಾಧವ್