ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂತಸದ ಹೊನಲಲ್ಲಿ ಗಂಗಾ ಕಾವೇರಿ
ಸುದ್ದಿ/ಗಾಸಿಪ್
Feedback Print Bookmark and Share
 

MOKSHENDRA
ಗಂಗಾ ಕಾವೇರಿ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದು ತಮ್ಮ ಸಂತಸ ಹಂಚಿಕೊಂಡಿತು. ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರು ಬಂದಿದ್ದಾರೆ. ಮುಂದೆ ಅವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸಂತೋಷದಿಂದ ಹೇಳಿಕೊಂಡಿತು ಚಿತ್ರತಂಡ.

ನಾಯಕ ಅಕ್ಷಯ್ ಕುಲು-ಮನಾಲಿಯಲ್ಲಿ 250 ಅಡಿ ಎತ್ತರದಿಂದ ತಣ್ಣನೆಯ ನೀರಿಗೆ ಜಿಗಿದದ್ದೊಂದು ಪವಾಡ ಎಂದು ಬಣ್ಣಿಸಿದರು. ಆ ಸನ್ನಿವೇಶ ಚಿತ್ರಕ್ಕೆ ಸೇರಿಕೊಂಡಿದ್ದು ತಡವಾಗಿ. ನಾನೇನಾದರೂ ಚಿತ್ರದಲ್ಲಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ನಮ್ಮ ತಂದೆ ವೆಂಕಟಪ್ಪ ಹಾಗೂ ನಿರ್ದೇಶಕ ವಿಷ್ಣುಕಾಂತ್ ಎಂದರು ಅಕ್ಷಯ್.

ಅನೇಕ ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿ ಬಂದ ರೂಪಾದೇವಿ, ತಾವು ಈ ಚಿತ್ರದಲ್ಲಿ ನಟಿಸಲು ಕಾರಣ ನಿರ್ದೇಶಕ ವಿಷ್ಣುಕಾಂತ್ ಎಂದರು. ನಾಯಕಿಯರು, ಅಕ್ಷಯ್ ಪಟ್ಟ ಶ್ರಮ ಹಾಗೂ ಕೆ. ಕಲ್ಯಾಣ್ ಅವರ ಸಂಗೀತವನ್ನು ಮನಸಾರೆ ಕೊಂಡಾಡಿದರು ವಿಷ್ಣುಕಾಂತ್. ಸಂಗೀತ ನಿರ್ದೇಶಕ ಮುಗುಳ್ನಗುತ್ತಾ ಕುಳಿತಿದ್ದರು.

MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಕ್ಷಯ್ ಗಂಗಾ ಕಾವೇರಿ ವಿಷ್ಣುಕಾಂತ್