ದಿನೇಶ್ ಬಾಬು ಅವರ ಭಾರೀ ನಿರೀಕ್ಷೆಯ ಜನುಮದ ಗೆಳತಿ ಚಿತ್ರ ಬಿಡುಗಡೆಯಾಗಿದೆ. ಆದರೆ ಪ್ರೇಕ್ಷಕ ವಲಯದಲ್ಲಿ ಮಾತ್ರ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಒಂದು ಸಾಮಾನ್ಯ ಚಿತ್ರ, ಪೇಲವವಾದ ನಿರೂಪಣೆ ಜೊತೆಗೆ ಸತ್ವವಿಲ್ಲದ ಡೈಲಾಗ್‌ಗಳು ಪ್ರೇಕ್ಷಕರನ್ನು ಬೋರ್ ಹೊಡೆಸುವಂತೆ ಮಾಡಿದೆ.
ಮಿಸ್ಟರ್ ಗರಗಸ ಚಿತ್ರದ ಯಶಸ್ಸಿನ ಗುಂಗಲ್ಲಿ ದಿನೇಶ್ ಬಾಬು ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರಕಥೆಯ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಎಂಬ ಅಂಶ ಪ್ರೇಕ್ಷಕ ವಲಯದಿಂದ ಕೇಳಿ ಬರುತ್ತಿದೆ. ಹಿಂದೆ ನಿರ್ದೇಶಕರು ಇದೊಂದು ಫ್ರೆಂಚ್ ಕವಿತೆಯೊಂದನ್ನು ಆಧರಿಸಿದ ಚಿತ್ರ ಎಂಬ ಮಾತು ಹೇಳಿದ್ದರು. ಆದರೆ ಚಿತ್ರ ನೋಡಿ ಬಂದ ಪ್ರೇಕ್ಷಕ ಮಾತ್ರ ಇದು ಮಲಯಾಳಂ ಚಿತ್ರ 'ಯಾತ್ರಂ'ನ ಯಥಾ ಕಾಪಿ ಎಂದು ಆಡಿಕೊಳ್ಳುತ್ತಿದ್ದಾರೆ.
MOKSHENDRA
ಬ್ರೇಕ್‌ಗಾಗಿ ಕಾಯುತ್ತಿದ್ದ ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ವಿಶ್ವಾಸವಿರಿಸಿದ್ದರು. ಆದರೆ ಇದು ಕೂಡಾ ಕೈ ಕೊಟ್ಟಂತೆ ಕಾಣುತ್ತದೆ. ಆದರೆ ಇವರ ಅಭಿನಯದ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವರ ಮಾತಿನ ಖದರ್, ಕಣ್ಣಲ್ಲೇ ಕೊಲ್ಲುವ ಪರಿ, ತಾಯಿಗಾಗಿ ಮನಸ್ಸಿನಲ್ಲಿ ಅನುಭವಿಸುವ ವೇದನೆ.. ಇವೆಲ್ಲದರಲ್ಲೂ ಕಿಟ್ಟಿಗೆ ಫುಲ್ ಮಾರ್ಕ್ಸ್. ಪೂಜಾ ಗಾಂಧಿ ಯಾವತ್ತಿಗೂ ಯಶಸ್ಸಿನ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಆಕೆಯದ್ದೇನಿದ್ದರೂ ಅವಕಾಶ ಸಿಗಬೇಕಷ್ಟೆ.
ಒಟ್ಟು ಈ ವಾರ ಎರಡು ಬಾಬುಗಳ ಚಿತ್ರಗಳು ಕೂಡ ಮಕಾಡೆ ಮಲಗಿವೆ.