ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್‌ರ ಧಮ್ ದೃಶ್ಯಕ್ಕೆ ಕತ್ತರಿ
ಸುದ್ದಿ/ಗಾಸಿಪ್
Feedback Print Bookmark and Share
 
ಕೊನೆಗೂ 'ಮಸ್ತ್ ಮಜಾ ಮಾಡಿ' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ನಾಯಕರ ದಂಡೇ ಇರುವ ಈ ಚಿತ್ರ ಸೆನ್ಸಾರ್ ಆಗಿ ಹೊರಗೆ ಬಂದಿದೆ. ಆದರೆ ಸೆನ್ಸಾರ್ ಮಂಡಳಿಯಲ್ಲಿ ಇದು ಮೊದಲು ಪಡೆದ ಸರ್ಟಿಫಿಕೇಟ್ ಮಾತ್ರ ಎ. ಇದರಿಂದ ಚಿತ್ರ ತಂಡಕ್ಕೆ ಅಘಾತವಾಗಿ ಈ ಬಗ್ಗೆ ಸೆನ್ಸಾರ್ ಮಂಡಳಿಯನ್ನು ಕೇಳಿಕೊಂಡಿದೆ.

ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಅವರು ಧಮ್ ಎಳೆಯುವ ದೃಶ್ಯವಿದೆ. ಇದರಿಂದ ಚಿತ್ರಕ್ಕೆ ಎ ಪ್ರಮಾಣ ಪತ್ರ ಸಿಕ್ಕಿದೆ. ಆದರೆ ಎ ಪ್ರಮಾಣ ಪತ್ರದಿಂದ ಫ್ಯಾಮಿಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಬಹುದೆಂಬ ಭಯದಿಂದ ನಿರ್ಮಾಪಕ ಸೌಂದರ್ಯನಾಗರಾಜು ಚಿತ್ರದ ಧಮ್ ದೃಶ್ಯಕ್ಕೆ ಕತ್ತರಿ ಹಾಕಿ ಮತ್ತೆ ಸೆನ್ಸಾರ್ ಮುಂದೆ ಹೋಗಿ ಕೊನೆಗೂ ಯು/ಎ ಪ್ರಮಾಣ ಪತ್ರ ಪಡೆದಿದ್ದಾರೆ.
MOKSHENDRA

ಚಿತ್ರವನ್ನು ಅನಂತರಾಜು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಶಿವರಾಜ್ ಕುಮಾರ್ ನಾಯಕರಾಗಿರುವ ನಂದ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಸ್ತ್ ಮಜಾ ಮಾಡಿ ಚಿತ್ರವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಐವರು ನಾಯಕಯರಿಗೆ ಜೆನ್ನಿಫರ್ ಒಬ್ಬಳು ನಾಯಕಿ. ಚಿತ್ರದಲ್ಲಿ ವಿಜಯ್ ರಾಘವೇಂದ್ರ, ದಿಗಂತ್, ಕೋಮಲ್, ನಾಗಕಿರಣ್, ಸುದೀಪ್ ನಟಿಸಿದ್ದಾರೆ. ಚಿತ್ರಕ್ಕೆ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇದೇ ಶುಕ್ರವಾರ ಇದರ ಜಾತಕ ಹೊರಬೀಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಸ್ತ್ ಮಜಾ ಮಾಡಿ ಸುದೀಪ್ ಅನಂತರಾಜು ಜೆನ್ನಿಫರ್