ಸಂಗೀತ ನಿರ್ದೇಶಕ ರಿಕ್ಕಿಕೇಜ್ ಮತ್ತೊಂದು ಮಳೆ ಹಾಡು ನೀಡಿದ್ದಾರೆ. ರಮೇಶ್ ನಿರ್ದೇಶನದ ಆಕ್ಸಿಡೆಂಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಿಕ್ಕಿ ಈಗ ರಮೇಶ್ ನಿರ್ದೇಶನದ ವೆಂಕಟ ಇನ್ ಸಂಕಟ ಚಿತ್ರಕ್ಕೂ ಮಳೆ ಹಾಡಿಗೆ ಸಂಗೀತ ನೀಡಿದ್ದಾರೆ. ಹಿಂದೆ ಆಕ್ಸಿಡೆಂಟ್ ಚಿತ್ರದಲ್ಲಿ ಬಾ ಮಳೆಯೇ ಬಾ.. ಹಾಡನ್ನು ಬಳಸಿಕೊಂಡಿದ್ದರು.
ವೆಂಕಟ ಇನ್ ಸಂಕಟ ಚಿತ್ರದಲ್ಲೂ ಚಿಟಪಟ ಮಳೆ ಹನಿ, ಮನಸಾ ನೆನೆಸೋ ಮಳೆಯೇ ಗೀತೆಗೆ ನಟಿ ಶರ್ಮಿಳಾ ಮಾಂಡ್ರೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ ನನ್ನ ಎಲ್ಲ ಚಿತ್ರಗಳಿಗಿಂತ ಭಿನ್ನ ಆಗಲಿದೆ. ಪ್ರೇಕ್ಷಕರ ಭರವಸೆಯನ್ನು ಹುಸಿಗೊಳಿಸುವುದಿಲ್ಲ ಎನ್ನುತ್ತಾರೆ ನಿರ್ದೇಶಕ ರಮೇಶ್ ಅರವಿಂದ್. ಚಿತ್ರದಲ್ಲಿ ರಮೇಶ್ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.
MOKSHENDRA
ಚಿತ್ರದಲ್ಲಿ ತುಳು ನಾಟಕ ರಂಗದ ದೇವದಾಸ್ ಕಾಪಿಕಾಡ್ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ಹಾಸ್ಯನಟ ಉಮೇಶ್ ಕೂಡಾ ಅಭಿನಯಿಸುತ್ತಿದ್ದಾರೆ. ಹೊಸ ಪ್ರತಿಭೆಗಳ ನಡುವೆ ನಾವು ಕಳೆದು ಹೋಗುತ್ತಿರುವಾಗ ರಮೇಶ್ ಅವರು ನನ್ನನ್ನು ಹುಡುಕಿ ಈ ಪಾತ್ರವನ್ನು ನೀವೇ ಮಾಡಬೇಕೆಂದಿರುವುದು ಅವರ ದೊಡ್ಡ ಗುಣ ಎನ್ನುತ್ತಾರೆ ಹಿರಿಯ ನಟ ಉಮೇಶ್. ಚಿತ್ರದಲ್ಲಿ ಮೊದಲ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಹಾಗೂ ಎರಡನೇ ನಾಯಕಿಯರಾಗಿ ಅನುಷಾ ಹಾಗೂ ಮೇಘನಾ ನಟಿಸುತ್ತಿದ್ದಾರೆ.