ಮುರಳಿಯ ಭಾರೀ ವಿಶ್ವಾಸವಿರಿಸಿದ್ದ ಮಿಂಚಿನ ಓಟ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋಲೊಪ್ಪಿಕೊಂಡಿತು. ಆದರೆ ನಟ ಮುರಳಿಗೆ ಇದರಿಂದೇನು ತೊಂದರೆಯಾಗಲಿಲ್ಲ ಈ ವರ್ಷ ಮುರಳಿ ಫುಲ್ ಬ್ಯುಸಿ. ಕೈ ತುಂಬಾ ಅವಕಾಶಗಳಿವೆ. ಅವರ ಚಿತ್ರಗಳು ಒಂದಾದ ನಂತರ ಒಂದು ಸೆಟ್ಟೇರುತ್ತಲೇ ಇವೆ. ಸದ್ಯ ಅವರ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.
ಇದೇ ತಿಂಗಳ ಕೊನೆಯಲ್ಲಿ ಶಿವಮಣಿ ಬಿಡುಗಡೆಗೆ ಸಿದ್ದವಾಗಿದ್ದು, ಅದಾದ ನಂತರ ಸಿಹಿಗಾಳಿ ಚಿತ್ರ ತೆರೆಕಾಣಲಿದೆ. ಇವರು ನಟಿಸಿದ ಯಜ್ಞ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯ ಮುರಾರಿ ಚಿತ್ರೀಕರಣದಲ್ಲಿ ಮುರಳಿ ತೊಡಗಿದ್ದಾರೆ.
MOKSHENDRA
ಈ ನಡುವೆ ಶಂಕರೇಗೌಡ ನಿರ್ಮಾಣದ ಮತ್ತೊಂದು ಚಿತ್ರಕ್ಕೂ ಮುರಳಿ ಸಹಿ ಹಾಕಿದ್ದಾರೆ. ಇವಲ್ಲದೆ ಮತ್ತೆ ಕೆಲವು ಅವಕಾಶಗಳು ಕೂಡಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಶಿವಮಣಿ ಚಿತ್ರದಲ್ಲಿ ನನಗೆ ಅಪಾರ ವಿಶ್ವಾಸವಿದೆ ಎನ್ನುವ ಅವರು ಇತರ ಚಿತ್ರಗಳಲ್ಲಿ ನನ್ನ ಗೆಟಪ್ ವಿಭಿನ್ನವಾಗಿದೆ ಎನ್ನುತ್ತಾರೆ. ಯಾವುದಕ್ಕೂ ಶಿವಮಣಿಯ ಪ್ರಭಾವ ಯಾವ ರೀತಿ ಇದೆ ಎಂಬುದನ್ನು ಕಾದು ನೋಡಬೇಕು.