ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿರುಗಾಳಿಯಲ್ಲಿ ಝೇಂಕರಿಸಲಿರುವ ಚೇತನ್ ಧ್ವನಿ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಆ ದಿನಗಳು ಚಿತ್ರದ ಮೂಲಕ ತಮ್ಮ ವಿಶಿಷ್ಟ ಅಭಿನಯ ಪ್ರದರ್ಶಿಸಿದ ಚೇತನ್ ನಟಿಸಿರುವ ಎರಡನೇ ಚಿತ್ರ ಬಿರುಗಾಳಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಗೆಳೆಯ ಚಿತ್ರ ನಿರ್ದೇಶಿಸಿದ ಹರ್ಷ ನಿರ್ದೇಶಿಸಿದ್ದಾರೆ. ವಿದೇಶದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಬಂದಿರುವ ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ.

ಈ ಚಿತ್ರದಲ್ಲಿ ಚೇತನ್ ಅಭಿಮಾನಿಗಳು ಅವರ ನಿಜವಾದ ಧ್ವನಿಯನ್ನು ಕೇಳಬಹುದು. ಅದಕ್ಕಾಗಿ ಚಿತ್ರಕ್ಕೆ ಅವರೇ ಡಬ್ ಮಾಡಿದ್ದರು. ಈ ಹಿಂದಿನ ಆ ದಿನಗಳು ಚಿತ್ರಕ್ಕೆ ದೀಲೀಪ್‌ರಾಜ್ ಡಬ್ ಮಾಡಿದ್ದರು. ಅದು ತುಂಬಾ ಹೊಂದಿಕೊಂಡಿತ್ತು. ಆದರೆ ಚಿತ್ರದಲ್ಲಿ ನೈಜತೆ ಬರಲು ಈ ಸಲ ಸ್ವತಃ ಚೇತನ್ ಅವರೇ ಡಬ್ ಮಾಡಿದ್ದಾರೆ.

ಈ ಚಿತ್ರ ಅದ್ಬುತವಾಗಿ ಮೂಡಿಬಂದಿದೆ. ಇಲ್ಲಿ ಆ ದಿನಗಳು ಚಿತ್ರದಲ್ಲಿ ನೋಡಿದ ಚೇತನ್‌ಗೂ ಬಿರುಗಾಳಿಯ ಚೇತನ್‌ಗೂ ತುಂಬಾ ವ್ಯತ್ಯಾಸವಿದೆ. ಇಲ್ಲಿ ಚೇತನ್‌ನ ವಿವಿಧ ಮುಖವನ್ನು ನೋಡಬಹುದು. ಇವರು ವಿಶಿಷ್ಟ ಐದು ಗೆಟಪ್‌ಗಳಲ್ಲಿ ಕಂಗೊಳಿಸಿದ್ದಾರೆ. ಈ ಚಿತ್ರ ಮುಗಿಯುವವರೆಗೆ ಚೇತನ್ ಬೇರೆ ಯಾವ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಇದಾದ ನಂತರ ಮತ್ತೆ ಆ ದಿನಗಳು ಜೋಡಿ ಚೈತನ್ಯ ಹಾಗೂ ಚೇತನ್ ಜೊತೆಯಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆ ದಿನಗಳು ಚೇತನ್ ಹರ್ಷ ಬಿರುಗಾಳಿ