ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಮ್ಮ 'ಡಾಕ್ಟರ್' ಆದ ಬಗ್ಗೆ ಮಗನ ಸಂತಸ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಅಮ್ಮನಿಗೆ ಡಾಕ್ಟರೇಟ್ ಸಿಕ್ಕಿರುವುದು ನನ್ನ ಪಾಲಿಗೆ ದೊಡ್ಡ ಹಬ್ಬ ಎನ್ನುವಾಗ ವಿನೋದ್ ರಾಜ್ ಭಾವುಕರಾಗುತ್ತಾರೆ. ಅಮ್ಮ ನೂರಾರು ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂಬ ಸಣ್ಣ ಕೊರಗು ಅಮ್ಮನನ್ನು ಕಾಡುತ್ತಿತ್ತು. ಈಗ ಆ ಕೊರಗು ನೀಗಿದೆ ಎಂದರು.

ಉದ್ಯಮದ ಹಲವು ಮಂದಿ ದೂರವಾಣಿ ಮೂಲಕ ಅಮ್ಮನನ್ನು ಅಭಿನಂದಿಸುತ್ತಿದ್ದಾರೆ. ಒಬ್ಬ ಮಗನಾಗಿ ಅಲ್ಲದೆ ಒಬ್ಬ ಅಭಿಮಾನಿಯಾಗಿ ನೋಡಿದಾಗ ಅಮ್ಮನ ಸಾಧನೆಯ ಬಗ್ಗೆ ಹೆಮ್ಮೆಯೆನಿಸುತ್ತದೆ ಎನ್ನುತ್ತಾರೆ ವಿನೋದ್ ರಾಜ್.

ವಿನೋದ್ ರಾಜ್ ಅವರ ಹೊಸ ಚಿತ್ರ 'ಯಾರದು?' ಸದ್ಯದಲ್ಲೇ ಆರಂಭವಾಗಲಿದೆ. ಶುಕ್ರ ಚಿತ್ರದ ನಂತರ ಬ್ರೇಕ್ ತಗೊಂಡಿದ್ದ ಅವರು ಈಗ ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎನ್ನುತ್ತಾರೆ ಅವರು.

ಮೂಡಿಗೆರೆ ಬಳಿಯ ಬಾಳೂರು ಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ವಿನೋದ್ ರಾಜ್ ತಾಯಿಯಾಗಿ ಸ್ವತಃ ಲೀಲಾವತಿ ನಟಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿನೋದ್ ರಾಜ್, ಡಾಲೀಲಾವತಿ, ಯಾರದು, ಡಾಕ್ಟರೇಟ್