ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಗುವಲ್ಲೇ ಉತ್ತರ ನೀಡಿದ ಬೆಡಗಿ ಕಾವ್ಯ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಇತ್ತೀಚೆಗೆ ನಡೆದ 'ಚೆಲುವೆಯೇ ನಿನ್ನ ನೋಡಲು' ಚಿತ್ರದ ಮುಹೂರ್ತ ಸಮಾರಂಭಕ್ಕೆ ನಟಿ ಕಾವ್ಯ ಬಂದಿದ್ದರು. ಬಹುಶಃ ಯಾವ ಕಾವ್ಯ ಎಂದು ಕೇಳಿಕೊಳ್ಳಬೇಕಾದಿತು. ಯಾಕೆಂದರೆ ಈಕೆ ವಿಜಯ್ ಜೊತೆ ನಾಯಕಿಯಾಗಿ ನಟಿಸಿದ ಯುಗ ಚಿತ್ರ ಸೋತಿತ್ತು. ನಂತರ ಈಕೆಯೂ ಚಿತ್ರರಂಗದಿಂದ ದೂರವಾದರು.

ಚಿತ್ರರಂಗದಿಂದ ಅನೇಕ ಆಫರ್‌ಗಳು ಬರುತ್ತವೆ ಎಂಬ ಅವರ ನಿರೀಕ್ಷೆ ಹುಸಿಯಾಯಿತು. ಈಗ ಚೆಲುವೆಯೇ ನಿನ್ನ ನೋಡಲು ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಎಂಟ್ರಿಯಾಗುತ್ತಿದ್ದೇನೆ. ಅವಕಾಶ ಕೊಟ್ಟ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದರು.

ಯುಗ ಚಿತ್ರದಲ್ಲಿ ನಾಯಕಿಯಾಗಿದ್ದನ್ನು ಮರೆತು ಕಾವ್ಯ ಮಾತನಾಡಿದರು. ಒಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಈಗ ಮತ್ತೊಂದು ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ ಇಮೇಜ್‌ಗೆ ಧಕ್ಕೆಯಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಬೆಡಗಿಯ ಉತ್ತರ ಕೇವಲ ನಗು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೆಲುವೆಯೇ ನಿನ್ನ ನೋಡಲು, ಕಾವ್ಯ, ಯುಗ, ವಿಜಯ್