ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್ ಕನಸು ಕಂಡು ಹಾರಿದ ದಿಗಂತ್ ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸಾಗಿದ್ದಾರೆ. ಹಿಂದಿಯಲ್ಲಿ ಸಿಕ್ಕಿದ ಅವಕಾಶ ಕೈ ಜಾರಿದೆ. ದಿಗಂತ್‌ಗೆ ಹಿಂದಿ ಮಾತನಾಡಲು ಬರೋದಿಲ್ಲ ಎಂಬ ಕಾರಣಕ್ಕೆ ಅವಕಾಶ ತಪ್ಪಿದೆ ಎನ್ನುವುದು ಚಿತ್ರರಂಗದ ಮೂಲಗಳ ಅಭಿಪ್ರಾಯ.
ಒಂದು ವಾರದ ಹಿಂದೆಯಷ್ಟೇ ರಣದೀಪ್ ಹೂಡಾ, ನಂದಿತಾ ದಾಸ್ ಅಭಿನಯದ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುವ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದರು. ಆಗ ಸ್ಯಾಂಡಲ್‌ವುಡ್ ಹುಡುಗ ಬಾಲಿವುಡ್‌ನಲ್ಲಿ ಮಿಂಚಲಿ ಎಂದು ಗಾಂಧಿನಗರ ಆಶಿಸಿತ್ತು. ಆದರೆ ಈಗ ಸಿಕ್ಕ ಅವಕಾಶವೂ ಕೈ ಜಾರಿದೆ.
ದಿಗಂತ್‌ಗೆ ಅದೇಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಅವರು ಎರಡನೇ ನಾಯಕರಾಗಿ 'ಮುಂಗಾರು ಮಳೆ' ಹಾಗೂ 'ಗಾಳಿಪಟ' ಚಿತ್ರದಲ್ಲಿ ನಟಿಸಿದರೂ ಪ್ರೇಕ್ಷಕರು ಅವರನ್ನು ಸ್ವೀಕರಿಸಲಿಲ್ಲ. ಅವರು ನಾಯಕರಾಗಿ ನಟಿಸಿದ 'ಮಿಸ್ ಕ್ಯಾಲಿಫೊರ್ನಿಯಾ' ಚಿತ್ರ ಒಂದು ವಾರದಲ್ಲೇ ಚಿತ್ರಮಂದಿರಗಳಿಂದ ಎತ್ತಂಗಡಿಯಾಯಿತು. ಈಗ 'ಮಸ್ತ್ ಮಜಾ ಮಾಡಿ' ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಐವರು ನಾಯಕರಿದ್ದಾರೆ. ಒಟ್ಟು ಈ ಡಿಂಪಲ್ ಹೀರೋಗೆ ಅದೃಷ್ಟ ನೆಟ್ಟಗಿಲ್ಲ.