ಬಿಂದಾಸ್ ಚಿತ್ರ ನಿರ್ಮಿಸಿದ್ದ ಎಂ. ಚಂದ್ರಶೇಖರ್ ಈಗ ಮತ್ತೊಂದು ಚಿತ್ರ ನಿರ್ಮಾಣದ ಸಿದ್ಧತೆಯಲ್ಲಿದ್ದಾರೆ. ಅವರ ಹೊಸ ಚಿತ್ರಕ್ಕೆ ಗಣೇಶ್ ನಾಯಕರಾಗಲಿದ್ದಾರೆ. 'ಮೊಗ್ಗಿನ ಮನಸು' ಚಿತ್ರದ ನಿರ್ದೇಶಕ ಶಶಾಂಕ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆದರೆ ಗಣೇಶ್ ಈಗ 'ಉಲ್ಲಾಸ ಉತ್ಸಾಹ' ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಯಾವುದಕ್ಕೂ ಜನವರಿ 15ರ ನಂತರ ಚಿತ್ರದ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ.
ಈ ಚಿತ್ರದ ಜೊತೆ ಜೊತೆಗೆ ಚಂದ್ರಶೇಖರ್ ಇನ್ನೆರಡು ಚಿತ್ರಗಳನ್ನು ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವುಗಳಲ್ಲಿ ಒಂದು ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಇದು ಕೂಡಾ ರೀಮೇಕ್ ಚಿತ್ರ. ಈಗಾಗಲೇ ಚಿತ್ರದ ರೀಮೇಕ್ ಹಕ್ಕನ್ನು ಪಡೆದಿದ್ದಾರೆ.
ಆದರೆ ಯಾವ ಭಾಷೆಯ ಚಿತ್ರವನ್ನು ರೀಮೇಕ್ ಮಾಡುತ್ತಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಸದ್ಯ ದರ್ಶನ್ 'ಅಭಯ್' ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ದರ್ಶನ್ ಒಪ್ಪಿದ ಕೂಡಲೇ ಯಾರು ಈ ಚಿತ್ರವನ್ನು ನಿರ್ದೇಶಿಸಬೇಕು ಎಂದು ನಿರ್ಧರಿಸುತ್ತಾರಂತೆ. ಮತ್ತೊಂದು ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದು, ಇದು ಸ್ವಮೇಕ್ ಚಿತ್ರವಾಗಲಿದೆ.