ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » '100/35' ದೀಪಕ್‌ರ ಜಸ್ಟ್‌ಪಾಸ್ ಕಥೆ
ಸುದ್ದಿ/ಗಾಸಿಪ್
Feedback Print Bookmark and Share
 
ಪರೀಕ್ಷೆಯಲ್ಲಿ 100ರಲ್ಲಿ ಜಸ್ಟ್ 35 ಅಂಕ ಸಿಕ್ಕರೆ ಸಾಕು ಎಂದು ಅನೇಕ ವಿದ್ಯಾರ್ಥಿಗಳು ದೇವರಲ್ಲಿ ಕೈ ಮುಗಿಯುತ್ತಿರುತ್ತಾರೆ. ಈಗ ಅದೇ ಚಿತ್ರವಾಗುತ್ತಿದೆ. ಚಿತ್ರದ ಹೆಸರು 100/35. ಈಗ ಚಿತ್ರೀಕರಣ ಮುಗಿದು ಡಬ್ಬಿಂಗ್ ನಡೆಯುತ್ತಿದೆ.

ಜಸ್ಟ್ ಪಾಸ್ ಆದ ಹುಡುಗರ ಕಥೆ ಎನ್ನುತ್ತಾರೆ ನಿರ್ದೇಶಕ ದೀಪಕ್. ಇದರಲ್ಲಿ ನಾಯಕ-ನಾಯಕಿ ಎಂಬ ಭೇದ ಭಾವವಿಲ್ಲ. ನಾಲ್ಕು ಜನ ಹೊಸ ಹುಡುಗರಿರುತ್ತಾರೆ. ಜೀವನದಲ್ಲಿ ಬರುವ ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸುತ್ತಾ ಹೋಗುತ್ತಾರೆ.
MOKSHENDRA

ಹರೆಯದ ವಯಸ್ಸಿನಲ್ಲಿ ಹುಡುಗ ಹುಡುಗಿಯರ ಮನಸ್ಥಿತಿ ಹೇಗಿರುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ನಿರ್ದೇಶಕರು ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕರು ಈ ಮೊದಲು ಸಾಕ್ಷ್ಯಚಿತ್ರಗಳನ್ನು ಮಾಡಿಕೊಂಡಿದ್ದರು. ಅಲ್ಲಿ ಹತ್ತಾರು ಮಂದಿ ಜೊತೆ ಸೇರಿ ಸಾಕಷ್ಟು ಚಲನಚಿತ್ರೋತ್ಸವಗಳಲ್ಲಿ ಸೇರಿ 100/35 ಎಂಬ ಚಿತ್ರ ಮಾಡುತ್ತಿದ್ದಾರೆ.

ರಘು, ವಿಕ್ರಮ್, ಜೋಷಿ, ಮನೋಜ್ಞ ಮುಂತಾದ ಹೊಸ ಮುಖಗಳನ್ನು ನಿರ್ದೇಶಕ ದೀಪಕ್ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಖಾಸಗಿ ಟಿವಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿದ್ದ ಶ್ವೇತಾಮೂರ್ತಿ ನಾಯಕಿ. ಚಿತ್ರದಲ್ಲಿ 6 ಹಾಡುಗಳಿವೆ. ಪ್ರಣವ್ ಅಯ್ಯಂಗಾರ್ ಸಂಗೀತ ನೀಡಿದ್ದಾರೆ. 100/35ಕ್ಕೆ ಪ್ರೇಕ್ಷಕರು ಎಷ್ಟು ಅಂಕ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 10035, ದೀಪಕ್ ರಘು, ವಿಕ್ರಮ್, ಜೋಷಿ, ಮನೋಜ್ಞ, ಶ್ವೇತಾಮೂರ್ತಿ