ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಏನು ಹರಿಪ್ರಿಯಾ, ಇದು ಸರಿಯಾ?
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಚಿತ್ರರಂಗ ಎಂದ ಮೇಲೆ ಅಲ್ಲಿ ಚಿತ್ರತಂಡದ ನಡುವೆ ಮುನಿಸು, ಸಣ್ಣ-ಪುಟ್ಟ ಗೊಂದಲಗಳು ಸಹಜ. ಅದನ್ನು ನಂತರದ ಕೆಲವೇ ಕ್ಷಣಗಳಲ್ಲಿ ಮರೆಯುತ್ತಾರೆ. ಆದರೆ ನಟಿ ಹರಿಪ್ರಿಯಾ ಮಾತ್ರ ಒಮ್ಮೆ ಕಿರಿಕ್ಕಾದರೆ ಅದನ್ನೇ ಮನಸ್ಸಲ್ಲಿಟ್ಟುಕೊಂಡು ಮಂಡಿಗೆ ತಿನ್ನುತ್ತಿರುತ್ತಾರೆ.

ಅವರಿಗೂ ಈ ಸಂಭಾಷಣೆ ಚಿತ್ರ ತಂಡಕ್ಕೂ ಹಿಂದೊಮ್ಮೆ ನಡೆದ ಸಣ್ಣ ಮನಸ್ತಾಪವನ್ನು ಇನ್ನೂ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಇದರಿಂದಾಗಿ ಮೊನ್ನೆ ನಡೆದ ಈ ಸಂಭಾಷಣೆ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮಕ್ಕೂ ಬರಲಿಲ್ಲ. ಹಿಂದೊಮ್ಮೆ ಇದೇ ಚಿತ್ರದ ಪತ್ರಿಕಾಗೋಷ್ಠಿಗೂ ಬರಲಿಲ್ಲ.

ಈ ಬಗ್ಗೆ ಕಾರಣ ಕೇಳಿದರೆ ನಿರ್ಮಾಪಕರು ನನ್ನನ್ನು ಕರೆಯಲಿಲ್ಲ ಎನ್ನುತ್ತಾರೆ. ಆದರೆ ನಿರ್ಮಾಪಕ ಶ್ರೀನಿವಾಸ್ ಪೂಜಾರ್ ಇದನ್ನು ಅಲ್ಲಗಳೆದಿದ್ದಾರೆ. ಎರಡು ವಾರದ ಹಿಂದೆ ಸ್ವತಃ ನಾನೇ ಫೋನ್ ಮಾಡಿ ಬರಲೇಬೇಕು ಎಂದು ಹೇಳಿದ್ದೇನೆ. ಅದೂ ಈ ಸಂಭಾಷಣೆ ಚಿತ್ರದ ಮೇಲಾಣೆ ಎನ್ನುತ್ತಾರೆ. ಹತ್ತು ದಿನಗಳ ಹಿಂದೆ ಇವರ ಪ್ರೊಡಕ್ಷನ್ ಮ್ಯಾನೇಜರ್ ಪ್ರಿಯಾರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ಫೋನ್ ಎತ್ತಲಿಲ್ಲ.

ಆದರೆ ಈ ಸಂಭಾಷಣೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ದಿನವೇ ಚೆಲುವೆಯೇ ನಿನ್ನ ನೋಡಲು ಚಿತ್ರದ ಮುಹೂರ್ತಕ್ಕೆ ಬಂದಿದ್ದರು. ನಂತರ ನಡೆದ ಮತ್ತೊಂದು ಪತ್ರಿಕಾಗೋಷ್ಠಿಗೂ ಹೋಗಿದ್ದರು. ಆದರೆ ಸಂಭಾಷಣೆಯ ನಿರ್ಮಾಪಕರ ಕಿವಿಗೆ ಹೂ ಇಟ್ಟಿದ್ದಾರೆ.

ಏನು ಹರಿಪ್ರಿಯಾ, ಇದು ಸರಿಯಾ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿಪ್ರಿಯಾ, ಈ ಸಂಭಾಷಣೆ, ಶ್ರೀನಿವಾಸ್ ಪೂಜಾರ್