ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಾರ್ಗವ ಉವಾಚ...
ಸುದ್ದಿ/ಗಾಸಿಪ್
Feedback Print Bookmark and Share
 
ನನ್ನಲ್ಲಿ ಇನ್ನೂ ಶಕ್ತಿ-ಯುಕ್ತಿ ಇದೆ ಎಂದರು ಹಿರಿಯ ನಿರ್ದೇಶಕ ಭಾರ್ಗವ, ಅವರು ಗಂಡುಗಲಿ ಕುಮಾರರಾಮ ನಂತರ ಚಿತ್ರ ನಿರ್ದೇಶಿಸುತ್ತಾರೋ ಇಲ್ಲವೋ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ನಾನು ಚಿತ್ರ ನಿರ್ದೇಶಿಸುವುದಿಲ್ಲವೆಂದು ಕೂಡಾ ಹೇಳಿಲ್ಲ. ಹಾಗಂತ ನಿರ್ದೇಶಿಸುತ್ತೆನೆಂದು ಕೂಡಾ ಹೇಳಿಲ್ಲ ಎಂದರು ನಿರ್ದೇಶಕ ಭಾರ್ಗವ.

ಈಗಿನ ಎಷ್ಟೊ ಹೊಸ ನಿರ್ಮಾಪಕರಿಗೆ ನನ್ನ ಕೆಲಸ, ಮನೋಭಾವದ ಅರಿವಿಲ್ಲ. ಎಷ್ಟೋ ಜನ ನಾನು ದೂರವಿದ್ದೇನೆ ಅಂದುಕೊಂಡಿದ್ದಾರೆ. ಇನ್ನು ಕೆಲವರು ಚಿತ್ರ ಮಾಡಿಕೊಡಿ ಎಂದು ಕೇಳಿ ಬಂದಿದ್ದಾರೆ. ಆದರೆ ನಾನು ಒಪ್ಪಿಲ್ಲ. ನನಗೆ ಚಿತ್ರ ಮಾಡುವುದು ಮುಖ್ಯ ಅಲ್ಲ. ಅದು ಬಿಡುಗಡೆಯಾಗುವುದು ಮುಖ್ಯ ಎಂದರು.

ಅವರು ಹೀಗೆ ಹೇಳಲು ಕಾರಣವೂ ಇತ್ತು. ಈವರೆಗೆ ಅವರು ನಿರ್ದೇಶಿಸಿದ ಯಾವ ಚಿತ್ರವೂ ಡಬ್ಬಾದಲ್ಲಿ ಕೊಳೆತ್ತಿಲ್ಲವಂತೆ. ಹಾಗಾಗಿ ಯಾವುದಕ್ಕೂ ಸೈ ಎನ್ನುವ ನಿರ್ಮಾಪಕರಿಗೆ ಮಾತ್ರ ನಾನು ಚಿತ್ರ ಮಾಡಿಕೊಡಲು ಸಿದ್ಧ ಎಂದರು. ಭಾರ್ಗವ ಈವರೆಗೆ ಐವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭಾರ್ಗವ ಈವರೆಗೆ ಏಳು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ 5 ಚಿತ್ರಗಳು ಗೆದ್ದಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರ್ಗವ, ಗಂಡುಗಲಿ ಕುಮಾರರಾಮ, ನಿರ್ದೇಶನ