ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂಬಾರಿ ಧ್ವನಿ ಸುರುಳಿ ಬಿಡುಗಡೆ
ಸುದ್ದಿ/ಗಾಸಿಪ್
Feedback Print Bookmark and Share
 
ಇತ್ತೀಚೆಗೆ ಅಂಬಾರಿ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಯಿತು. ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್, 24 ದಿನಗಳಲ್ಲಿ ನಾಸಿಕ್, ಗ್ವಾಲಿಯರ್, ಜೈಪುರ, ರಾಜಸ್ತಾನ, ದಾಂಡೇಲಿ ಮುಂತಾದೆಡೆ ಚಿತ್ರೀಕರಣ ಮುಗಿಸಿ ಬಂದ ಬಗೆ ಹಾಗೂ ಪಟ್ಟ ಪಾಡಿನ ಬಗ್ಗೆ ಹೇಳಿಕೊಂಡರು.
MOKSHENDRA
ಸಂಜೆ 4 ಕ್ಕೆ ಆರಂಭವಾಗಬೇಕಿದ್ದ ಪತ್ರಿಕಾಗೋಷ್ಠಿ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ಪತ್ರಕರ್ತರಲ್ಲಿ ಸಾರಿ ಕೇಳುತ್ತಲೇ -ನಿರ್ದೇಶಕರು ಮಾತಿಗಿಳಿದರು. ಡಿಟಿಎಸ್ ಹಂತದಲ್ಲಿರುವ ಅಂಬಾರಿ ಚಿತ್ರಕ್ಕೆ ನಿರ್ಮಾಪಕರು ಕೇಳಿದ್ದೆಲ್ಲ ಕೊಟ್ಟಿದ್ದಾರೆ. ಅವರನ್ನು ನಾನು ಸಾಯುವವರಗೆ ಮರೆಯುವುದಿಲ್ಲ ಎಂದರು.

ಕನ್ನಡ ಚಿತ್ರರಂಗಕ್ಕೆ ಬರಹಗಾರ ಹಾಗೂ ನಿರ್ದೇಶಕನ ಆಗಮನವಾಗಿದೆ. ಅಂಬಾರಿಯಿಂದ ಪ್ರೇಕ್ಷಕ ಅರಮನೆ ತಲುಪುವಂತೆ ಆಗಲಿ ಎಂದರು ಸಾಹಿತಿ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್. ಒಂಭತ್ತು ತಿಂಗಳ ಹಿಂದೆ ಆರಂಭವಾದ ಅಂಬಾರಿಯ ಧ್ವನಿ ಸುರುಳಿ ತಡವಾಗಿ ಬಿಡುಗಡೆಯಾಗಿದೆ. ಅಂದಹಾಗೆ ಚಿತ್ರದ ನಾಯಕ ಯೋಗೀಶ್ ಪತ್ರಿಕಾಗೋಷ್ಠಿ ಮುಗಿದು ಪತ್ರಕರ್ತರು ಹೊರಡುವಾಗ ಆಗಮಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಂಬಾರಿ, ಎಪಿಅರ್ಜುನ್, ಗ್ವಾಲಿಯರ್, ದಾಂಡೇಲಿ, ಜೈಪುರ