ಪ್ರೀತಿಯ 'ಬಿರುಗಾಳಿ'

ಬೆಂಗಳೂರು, ಶುಕ್ರವಾರ, 12 ಡಿಸೆಂಬರ್ 2008( 19:29 IST )
ಕಷ್ಟಪಟ್ಟು ಅಲ್ಲ ಪ್ರೀತಿಯಿಂದ ಮಾಡಿದ ಚಿತ್ರ 'ಬಿರುಗಾಳಿ' ಎಂದು ಬಿರುಗಾಳಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತಿಗಿಳಿದವರು ನಿರ್ದೇಶಕ ಹರ್ಷ.
ಈ ಮೊದಲು ಗೆಳೆಯ ಚಿತ್ರ ಮಾಡುವಾಗ ತನ್ನನ್ನು ಜನ ಒಪ್ಪಿಕೊಳ್ಳುತ್ತಾರೆಯೋ ಇಲ್ಲವೋ ಎಂದು ಭಯವಾಗಿದ್ದರ ಬಗ್ಗೆ ಹರ್ಷ ಹೇಳಿಕೊಂಡರು. ಬಿರುಗಾಳಿ ಚಿತ್ರದ ಕತೆಯನ್ನು ಐದಾರು ವರ್ಷಗಳ ಹಿಂದೆಯೇ ಸಿದ್ದಪಡಿಸಿಕೊಂಡಿದ್ದೆ. ಇದಕ್ಕೆ ತಕ್ಕಂತೆ ನಟ ಚೇತನ್ ಬಾಡಿ ಲಾಂಗ್ವೆಜ್, ಹೇರ್ ಸ್ಟೈಲ್ ಬದಲಾಯಿಸಿ ಸಿಕ್ಸ್ ಪ್ಯಾಕ್ ಬಂದಿದ್ದು ಎಲ್ಲವೂ ಈ ಚಿತ್ರಕ್ಕಾಗಿ ಎನ್ನುತ್ತಾ ನಾಯಕನನ್ನು ಹೊಗಳಿದರು.
ಆ ದಿನಗಳು ಚಿತ್ರದಲ್ಲಿ ಚೇತನ್‌ಗೆ ನೃತ್ಯವನ್ನಾಗಲೀ, ಹೊಡೆದಾಟದ ದೃಶ್ಯವನ್ನು ಪ್ರೇಕ್ಷಕರ ಮುಂದೆ ತೋರ್ಪಡಿಸಲು ಅವಕಾಶವಿರಲಿಲ್ಲ. ಬಿರುಗಾಳಿಯಲ್ಲಿ ಅವೆಲ್ಲವನ್ನು ಕಾಣಬಹುದು. ರೋಪ್ ಇಲ್ಲದೆ ಸಾಹಸ ದೃಶ್ಯಗಳನ್ನು ನಿಭಾಯಿಸಿದ್ದಾರೆ ಎನ್ನುತ್ತದೆ ಚಿತ್ರತಂಡ. ಸಮುದ್ರದಲ್ಲಿ ಏಳು ದಿನಗಳ ಕಾಲ ಚಿತ್ರೀಕರಿಸಲಾದ ಹೊಡೆದಾಟದ ದೃಶ್ಯದ ಸವಾಲನ್ನು ಚೇತನ್ ಎದುರಿಸಿದ್ದಾರೆ. ಚಿತ್ರ ಈ ತಿಂಗಳಾಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.