ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನೀ ನಡೆವ ಹಾದಿಯಲಿ...
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಸಿನಿಮಾ ನಿರ್ದೇಶನದಿಂದ ಧಾರವಾಹಿಯತ್ತ ಹೊರಳಿರುವ ಕವಿತಾ ಲಂಕೇಶ್ ಅವರ ನೀ ನಡೆವ ಹಾದಿಯಲಿ ಇದೀಗ 50 ಕಂತುಗಳನ್ನು ಪೂರೈಸಿದೆ.

ಈ ಕುರಿತು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಕವಿತಾ, ಧಾರವಾಹಿ ಒಂದು ರೀತಿ ಫ್ಯಾಕ್ಟರಿ ಥರ. ನಿತ್ಯ ದುಡಿಯುತ್ತಲೇ ಇರಬೇಕು. ಸಿನಿಮಾಕ್ಕಿಂತ ಭಿನ್ನ ಈ ಕ್ಷೇತ್ರ. ಅಷ್ಟೇ ಸವಾಲೂ ಕೂಡ. ಆದರೂ ಇಲ್ಲೊಂದು ರೀತಿಯ ಖುಷಿ ಇರುತ್ತೆ ಎಂದರು.

ಧಾರವಾಹಿಗಾಗಿ ಕವಿತಾ ಅವರಿಗೆ ಹಲವು ಆಫರ್‌ಗಳು ಬಂದಿದ್ದವು. ಅದಕ್ಕಾಗಿ ಮೂರು ಕಂತುಗಳನ್ನೂ ಅವರು ಶೂಟ್ ಮಾಡಿದ್ದರಂತೆ. ಅದ್ಯಾಕೋ, ಅವರಿಗೆ ಅದು ಇಷ್ಟವಾಗಲಿಲ್ಲ. ವಾಸ್ತವಕ್ಕೆ ಹತ್ತಿರವಿರುವ ವಿಷಯಗಳನ್ನು ತೋರಿಸಬೇಕು ಎಂಬುದೇ ಅವರ ಆಸೆ. ನಮ್ಮೊಳಗಿನ ನಮ್ಮದೇ ಕತೆ ಎಂಬ ಫೀಲ್ ಪ್ರತಿಯೊಬ್ಬರಿಗೂ ಅನಿಸುವಂತೆ ಕಥೆ ಹಣೆಯಲಾಗಿದೆ ಎಂದರು ಕವಿತಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕವಿತಾ ಲಂಕೇಶ್, ಧಾರವಾಹಿ, ನಿ ನಡೆವ ಹಾದಿ