ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಸೆಮಣೆ ಏರುವ ಸನ್ನಾಹದಲ್ಲಿ ವರ್ಷಾ
ಸುದ್ದಿ/ಗಾಸಿಪ್
Feedback Print Bookmark and Share
 
ನಟಿ ವರ್ಷಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನೆನಪಿರಲಿ ಚಿತ್ರದ ಪಾತ್ರದ ಮೂಲಕ ಗಮನ ಸೆಳೆದಿದ್ದ ವರ್ಷಾ, ಮುಂದಿನ ವರ್ಷದ ಫೆಬ್ರವರಿಯಲ್ಲಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಹುಡುಗನೊಬ್ಬನ ಕೈ ಹಿಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಈ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ ಮತ್ತು ಎತ್ತರದ ಹುಡುಗಿಯ ಕೈ ಹಿಡಿಯಲಿರುವ ಎತ್ತರದ ಹುಡುಗನಾರು ಎಂಬ ಪ್ರಶ್ನೆಗೆ ಉತ್ತರವೂ ದೊರೆತಿದೆ.
MOKSHENDRA
ನೆನಪಿರಲಿ ಚಿತ್ರದಲ್ಲಿ ಗಮನ ಸೆಳೆಯುವ ನಟನಾ ಚಾತುರ್ಯ ಪ್ರದರ್ಶಿಸಿದ್ದ ವರ್ಷಾ, ಆ ಬಳಿಕ ಎಫ್ಎಂ ರೇಡಿಯೋ ಚಾನೆಲ್‌ನಲ್ಲಿ ನಿರೂಪಕಿಯಾಗಿಯೂ, ಟೀವಿ ಚಾನೆಲ್‌ನಲ್ಲೂ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಆಂಕರ್ ಆಗಿ ಮನೆಮನೆ ಮಾತಾಗಿದ್ದರು.

ಇದಕ್ಕೆ ಮೊದಲು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ ಅವರೊಂದಿಗೆ ವರ್ಷಾ ಜೊತೆಯಾಗಿ ಸುತ್ತುವ ಮತ್ತು ಮದುವೆಯಾಗಲು ನಿರ್ಧರಿಸಿರುವ ಕುರಿತಾದ ಗಾಳಿ ಸುದ್ದಿ ಗಾಂಧಿನಗರದಲ್ಲಿ ಹಬ್ಬಿತ್ತು. ಅದನ್ನೀಗ ವರ್ಷಾ ಮನೆಯವರು ನಿರಾಕರಿಸಿದ್ದು, ವರ್ಷಾ ಕನ್ನಡ ಪ್ರೇಕ್ಷಕರಿಗೆ 'ನೆನಪಿರಲಿ' ಎನ್ನುತ್ತಲೇ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಅವರ ಬದುಕು ಬಂಗಾರವಾಗಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವರ್ಷಾ, ಮಠ, ಹಂಸಲೇಖಾ, ನಿರೂಪಕಿ, ನೆನಪಿರಲಿ