ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಟ್ರಾವೆಲ್ ಗೈಡ್‌'ಗೆ ಸೋನಾಲಿ ಆಯ್ಕೆ
ಸುದ್ದಿ/ಗಾಸಿಪ್
Feedback Print Bookmark and Share
 
ಶಿವರಾಜ್ ಕುಮಾರ್ ಟ್ರಾವೆಲ್ ಗೈಡ್ ಆಗಿ ನಟಿಸುತ್ತಿರುವ ಅದ್ದೂರಿ ಬಜೆಟ್‌‌ನ ಚೆಲುವೆಯೇ ನಿನ್ನ ನೋಡಲು ಚಿತ್ರಕ್ಕೆ ಬಾಲಿವುಡ್ ಬೆಡಗಿ ಸೋನಾಲಿ ಚೌಹಾಣ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ನಾಯಕಿ ಆಯ್ಕೆಯಾಗಲು ಶಿವಣ್ಣ ಕಾರಣ. ಸೋನಾಲಿ ಬಂದರೆ ಚೆನ್ನಾಗಿರುತ್ತೆ ಎಂದು ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.

ಒಮ್ಮೆ ಶಿವರಾಜ್ ಕುಮಾರ್ ಟಿವಿಯಲ್ಲಿ ಜನ್ನತ್ ಸಿನಿಮಾ ನೋಡುತ್ತಿದ್ದಂತೆ. ಚಿತ್ರ ನೋಡಿ ಖುಷಿಯಾಗುವುದಕ್ಕಿಂತ ಹೆಚ್ಚಾಗಿ ಸೋನಾಲ್ ಅಭಿನಯ ನೋಡಿ ಥ್ರಿಲ್ ಆದರಂತೆ. ತಕ್ಷಣ ನಿರ್ದೇಶಕ ರಘುರಾಮ್‌‌ಗೆ ದೂರವಾಣಿ ಮಾಡಿ ಸೋನಾಲ್ ನಮ್ಮ ಚಿತ್ರಕ್ಕೆ ನಾಯಕಿಯಾಗಬಹುದು ಎಂದರಂತೆ. ರಘುರಾಂ ಮುಂಬೈಗೆ ಫೋನ್ ಮಾಡಿ ಸೋನಾಲ್ ಅವರನ್ನು ಸಂಪರ್ಕಿಸಿ ನಾಯಕಿಯಾಗಿ ಆಯ್ಕೆ ಮಾಡಿದರು. ಹೀಗೆ ಶಿವಣ್ಣ ಶಿಫಾರಸ್ಸಿನ ಮೇರೆಗೆ ಸೋನಾಲ್ ಕನ್ನಡಕ್ಕೆ ಬಂದಿದ್ದಾರೆ ಎಂಬುದು ಗಾಂಧಿನಗರದ ಗುಸುಗುಸು.

ಸೋನಾಲ್ ಅವರನ್ನು ಚೆಲುವೆಯೇ ನಿನ್ನ ನೋಡಲು ಚಿತ್ರಕ್ಕೆ ನಾಯಕಿ ಪಾತ್ರಕ್ಕೆ ಶಿಫಾರಸ್ಸು ಮಾಡಲಿಲ್ಲ. ಇವರು ನಾಯಕಿಯಾಗಬಹುದೆಂದಷ್ಟೇ ಚಿತ್ರತಂಡಕ್ಕೆ ಹೇಳಿದೆ ಎನ್ನುತ್ತಾರೆ ಶಿವರಾಜ್ ಕುಮಾರ್. ಸೋನಾಲ್ ಮೂಲತಃ ದೆಹಲಿಯವರು. ಮಾಡೆಲಿಂಗ್ ಮಾಡುತ್ತಲೇ ಚಿತ್ರರಂಗ ಪ್ರವೇಶಿಸಿದ್ದಾರೆ. ಮಿಸ್ ವರ್ಲ್ದ್ ಟೂರಿಸಂ ಪ್ರಶಸ್ತಿಯನ್ನು ಕೂಡಾ ಪಡೆದಿದ್ದಾರೆ.

ಕನ್ನಡದ ನಟಿಯರು ಎಷ್ಟೇ ಚೆನ್ನಾಗಿ ಅಭಿನಯಿಸಿದರೂ ಅವರನ್ನು ಕರೆಯುವವರಿಲ್ಲ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ ಕುಮಾರ್, ಟ್ರಾವೆಲ್ ಗೈಡ್, ರಘುರಾಂ, ಬಾಲಿವುಡ್