ಅದು ಮಸ್ತ್ ಮಜಾ ಮಾಡಿ ಚಿತ್ರ ಬಿಡುಗಡೆಯ ನಂತರ ಕರೆದ ಪತ್ರಿಕಾಗೋಷ್ಠಿ. ಕ್ಯೂಟ್ ಗರ್ಲ್ ಜೆನ್ನಿಫರ್ ಅಂದು ಡಿಂಪಲ್ ಸ್ಟಾರ್ ದಿಗಂತ್‌ರನ್ನು ಸಿಕ್ಕಾಪಟ್ಟೆ ಹೊಗಳಿ ಬಿಟ್ಟರು. ನನ್ನ ಮತ್ತು ದಿಗಂತ್ ಕೆಮಿಸ್ಟ್ತ್ರಿ ಕರೆಕ್ಟ್ ಮ್ಯಾಚ್ ಆಗುತ್ತೆ ಎಂದರು ಜೆನ್ನಿ. ಚಿತ್ರೀಕರಣದ ಸಮಯದಲ್ಲಿ ಬ್ಯಾಂಕಾಕ್ ಬೀಚ್‌ನಲ್ಲಿ ಕುಣಿದ ದಿನಗಳನ್ನು ನೆನೆದರು. ಈ ಅನುಭವವನ್ನು ಎಂದು ಮರೆಯಲಾಗುವುದು ಎಂದು ಹೇಳಿ ಧನ್ಯರಾದರು.
ಪಡ್ಡೆ ಹುಡುಗರ ನಿದ್ದೆಗೆಡಿಸುವ ಈ ಹುಡುಗಿ, ದಿಗಂತ್‌ರನ್ನು 'ಹಿ ಈಸ್ ಸೋ ಕ್ಯೂಟ್ ಯು ನೋ' ಎಂದರು. ಜೆನ್ನಿಫರ್ ಹಾಗೂ ದಿಗಂತ್ 'ಬಿಸಿಲೇ' ಚಿತ್ರದಲ್ಲಿ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ. ಜೆನ್ನಿ ಈ ಹಿಂದೆ ವಿಜಯ್ ರಾಘವೇಂದ್ರ ಜೊತೆ 'ರಾಜೀವ್' ಚಿತ್ರದಲ್ಲಿ ನಟಿಸಿದ್ದರು. ಬ್ಯಾಂಕಾಕ್ ಬೀದಿಗಳಲ್ಲಿ ಜೆನ್ನಿಯೊಂದಿಗೆ ಹೆಜ್ಜೆ ಹಾಕಿದ್ದನ್ನು ಸ್ಮರಿಸಿಕೊಂಡ ಕೋಮಲ್ ಆ ಕ್ಷಣಗಳನ್ನು ಮರೆಯಲಾಗದು ಎಂದರು.
'ಜೋಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜೆನ್ನಿಫರ್‌ಗೆ ಕನ್ನಡದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಒದಗಿ ಬಂದುವು. ಈವರೆಗೆ ಈಕೆ 12 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಈಕೆ ಈಗ ಕನ್ನಡದ ನೇಟಿವಿಟಿಗೆ ಸೆಟ್ ಆಗಿದ್ದಾರೆ.
ಅಂದಹಾಗೆ ಕೋಮಲ್ ಅವರು ನಾಯಕರಾಗಿ ನಟಿಸಲಿರುವ ಚೆಲುವರಾಯಸ್ವಾಮಿ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಇದು ಸ್ಟೆಷಲ್ ಮಣ್ಣಿನ ಮಗ ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ತಮಿಳಿನ ಸಿಂಗಾಪುಲಿ ಈ ಚಿತ್ರ ನಿರ್ದೇಶಕರು. ಕೋಮಲ್ ಭಾವ ಶ್ರೀನಿವಾಸ್ ಇದರ ನಿರ್ಮಾಪಕರು. ನಾಯಕಿ ಇನ್ನೂ ಸಿಕ್ಕಿಲ್ಲ.