ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಲಾಜಿ - ಪೂಜಾ ಗಾಂಧಿಯ ಇನಿಯ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಎಲ್ಲರ ಮೆಚ್ಚುಗೆ ಗಳಿಸುವಂತಹ ಚಿತ್ರ ನೀಡಿದ ಮುಸ್ಸಂಜೆ ಮಾತು ಚಿತ್ರದ ನಿರ್ದೇಶಕ ಮಹೇಶ್ ಈಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಾರಿ ಅವರು ಒಂದು ನವೀರಾದ ಪ್ರೇಮಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ಇನಿಯ ಎಂದು ಟೈಟಲ್ ಇಟ್ಟಿದ್ದಾರೆ.

ಚಿತ್ರಕ್ಕೆ ಸ್ಪಲ್ವ ಅನುಭವವಿರುವ ಕಲಾವಿದರು ಬೇಕಾಗಿದ್ದರಿಂದ ಬಾಲಾಜಿ ಹಾಗೂ ಪೂಜಾ ಗಾಂಧಿ ಅವರನ್ನು ನಾಯಕ-ನಾಯಕಿಯರಾಗಿ ಆಯ್ಕೆ ಮಾಡಿದ್ದಾರೆ. ಮುಸ್ಸಂಜೆ ಮಾತು ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾದ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಆಳವಾದ ಪ್ರೀತಿಯಲ್ಲಿನ ಭಾವನೆಗಳ ಚಿತ್ರಣ ಇಲ್ಲಿರುತ್ತದೆ. ಪ್ರೀತಿಯಲ್ಲಿನ ಸರಿ ತಪ್ಪುಗಳನ್ನು ನವಿರಾದ ನಿರೂಪಣೆಯಲ್ಲಿ ಹೇಳುವ ಸವಾಲು ಈ ಚಿತ್ರದಲ್ಲಿ ನನಗೆ ಎದುರಾಗಿದೆ ಎಂದರು ನಿರ್ದೇಶಕ ಮಹೇಶ್.

ಇನಿಯ ಚಿತ್ರದಲ್ಲಿ ನಾಯಕ-ನಾಯಕಿಯೊಂದಿಗೆ 20ಕ್ಕೂ ಹೆಚ್ಚು ಪೋಷಕ ಕಲಾವಿದರು ನಟಿಸುತ್ತಿದ್ದಾರೆ. ಬಾಲಾಜಿಯ ಅಮ್ಮನಾಗಿ ಊರ್ವಶಿ ಕಾಣಿಸಿಕೊಳ್ಳಲಿದ್ದಾರೆ. ಮುಸ್ಸಂಜೆ ಮಾತು ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರೇ ಇಲ್ಲಿಯೂ ಇರುತ್ತಾರೆ. ಮುಸ್ಸಂಜೆ ಮಾತಿನ ಸಂಗೀತದ ಮೂಲಕ ಬೆಳಕಿಗೆ ಬಂದ ಶ್ರೀಧರ್ ಇನಿಯನಿಗೂ ಸಂಗೀತ ನೀಡಲಿದ್ದಾರೆ. ಈ ಚಿತ್ರವನ್ನು ಶೈಲೇಂದ್ರ ಬಾಬು ನಿರ್ಮಿಸುತ್ತಿದ್ದು, ಇದು ಅವರ ನಿರ್ಮಾಣದ 11 ನೇ ಚಿತ್ರ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಹೇಶ್, ಮುಸ್ಸಂಜೆ ಮಾತು, ಬಾಲಾಜಿ, ಪೂಜಾ ಗಾಂಧಿ, ಇನಿಯ