ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೆಂಟಿಮೆಂಟ್ ಚಿತ್ರ ತಬ್ಬಲಿ
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರೀತಿ, ಮಚ್ಚು-ಲಾಂಗ್ ಚಿತ್ರಗಳ ನಡುವೆ ಸೆಂಟಿಮೆಂಟ್ ಚಿತ್ರವೊಂದು ಥಿಯೇಟರ್‌ಗೆ ಬರುತ್ತಿದೆ. ಲೋಕಿ ನಿರ್ದೇಶನದ ತಬ್ಬಲಿ ಮುಂದಿನ ತಿಂಗಳಲ್ಲಿ ತೆರೆ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ತೆರೆಕಾಣುತ್ತಿರುವ ವಿಶಿಷ್ಟ ಸಿನಿಮಾ ಇದು. ಮಹಿಳಾ ಪ್ರೇಕ್ಷಕರನ್ನೇ ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಿದ್ದರೂ, ಎಲ್ಲಾ ವಯೋಮಾನದವರಿಗೂ ಚಿತ್ರ ಮೆಚ್ಚುಗೆಯಾಗುತ್ತದೆ. ಸಮಾಜಕ್ಕೊಂದು ಉತ್ತಮ ಸಂದೇಶವೂ ಇದರಿಂದ ವ್ಯಕ್ತವಾಗುತ್ತದೆ ಎಂದರು ನಿರ್ದೇಶಕ ಲೋಕಿ.

ತಬ್ಬಲಿ ಚಿತ್ರ ಮುಹೂರ್ತ ಆಚರಿಸಿಕೊಂಡಿದ್ದು, ಒಂದು ವರ್ಷದ ಹಿಂದೆ. ಯೋಜನೆಯಂತೆಯೇ ನಡೆದಿದ್ದರೆ, ಚಿತ್ರ ನಾಲ್ಕು ತಿಂಗಳ ಹಿಂದೆಯೇ ತೆರೆಕಾಣಬೇಕಿತ್ತು. ಆದರೆ ಸಾಹಸ ಸನ್ನಿವೇಶವೊಂದರಲ್ಲಿ ನಾಯಕ ಆಕಾಶ್ ಕೈ ಮುರಿದುಕೊಂಡಿದ್ದರಿಂದ ಚಿತ್ರೀಕರಣ ಮುಂದಕ್ಕೆ ಹೋಯಿತು.

ಕೆಲವು ದಿನಗಳ ಹಿಂದೆ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದ್ದು, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಿರುತೆರೆ ವಾಹಿನಿಗಳಲ್ಲಿ ಕಾಣಿಸುತ್ತಿರುವ ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಸಂಯೋಜಿಸಿರುವ ಚಿತ್ರದ ಮಾದೇಶ ಹಾಡು ಜನಪ್ರಿಯವಾಗಿದೆ. ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿದ್ದು, ಪ್ರೇಕ್ಷಕರು ಖಂಡಿತವಾಗಿಯೂ ಚಿತ್ರ ಮೆಚ್ಚಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು ನಿರ್ದೇಶಕ ಲೋಕಿ. ಆಕಾಶ್ ಮತ್ತು ಮೇಘನಾ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರದಲ್ಲಿ ಚಾರುಲತಾ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ.
MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಬ್ಬಲಿ, ಲೋಕಿ, ಆಕಾಶ್, ಮೇಘನಾ