ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ಪಾನಿಷ್‌ನಲ್ಲಿ 'ನಾನು ಗಾಂಧಿ'
ಸುದ್ದಿ/ಗಾಸಿಪ್
Feedback Print Bookmark and Share
 
ನಂಜುಂಡೇಗೌಡ ನಿರ್ದೇಶನದ ನಾನು ಗಾಂಧಿ ಮಕ್ಕಳ ಚಿತ್ರ ಸ್ಟಾನಿಷ್‌ಗೆ ಡಬ್ ಆಗುತ್ತಿದೆ. ಕೊಲಂಬಿಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಲಭಿಸಿತ್ತು. ಕಥಾವಸ್ತುವಿನಿಂದ ಪ್ರೇರಿತರಾದ ಸ್ಪಾನಿಷ್ ಚಿತ್ರ ನಿರ್ಮಾಪಕರು ಚಿತ್ರವನ್ನು ಡಬ್ ಮಾಡುವುದಾಗಿ ಹೇಳಿದ್ದಾರಂತೆ. ಈ ಮಧ್ಯೆ ಚಿತ್ರವನ್ನು ಹಿಂದಿಗೂ ಡಬ್ ಮಾಡುವುದಾಗಿ ಹೇಳುತ್ತಾರೆ ನಂಜೇಗೌಡ.

ಮಾರ್ಚ್‌ನಲ್ಲಿ ನಡೆಯಲಿರುವ ಸೋವಿಯತ್ ರಷ್ಯಾದ ಚಿತ್ರೋತ್ಸವದಲ್ಲಿಯೂ ತಮ್ಮ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ನಿರ್ದೇಶಕರು. ಮುಂದಿನ ವರ್ಷ ಜೂನ್ ವೇಳೆಗೆ ಅವರು ಮತ್ತೊಂದು ಮಕ್ಕಳ ಚಿತ್ರ ಮಾಡುವ ಸೂಚನೆ ನೀಡುತ್ತಾರೆ. ಈ ವರ್ಷಾರಂಭದಲ್ಲಿ ಗೌಡರ ನಿರ್ದೇಶನದ ನಾನು ನೀನು ಜೋಡಿ ಚಿತ್ರ ತೆರೆ ಕಂಡಿತ್ತು. ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿದ್ದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಾಣಲಿಲ್ಲ.

ಮುಂದಿನ ವರ್ಷ ಮತ್ತೊಂದು ಕಮರ್ಷಿಯಲ್ ಚಿತ್ರ ಮಾಡುವ ಉದ್ದೇಶವೂ ಅವರಿಗಿದೆ. ಇನ್ನು ಮುಂದಿನ ತಿಂಗಳು 9 ರಿಂದ 14ರವರೆಗೆ ರಾಜ್ಯದಲ್ಲಿ ಅಂತಾರಾಷ್ಟ್ತ್ರೀಯ ಮಕ್ಕಳ ಚಿತ್ರೋತ್ಸವ ನಡೆಯಲಿದೆ. ಆರು ಪ್ರಮುಖ ನಗರಗಳಲ್ಲಿ ನಡೆಯಲಿರುವ ಚಿತ್ರೋತ್ಸವಕ್ಕಾಗಿ ನಂಜುಂಡೇಗೌಡರು ಸಿದ್ಧತೆ ನಡೆಸುತ್ತಿದ್ದಾರೆ. ವಿವಿಧ ದೇಶಗಳ ಸುಮಾರು 30ಕ್ಕೂ ಹೆಚ್ಚು ಮಕ್ಕಳ ಚಿತ್ರಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂಜುಂಡೇಗೌಡ, ನಾನು ಗಾಂಧಿ, ಸ್ಟಾನಿಷ್, ಹಿಂದಿ, ಅಂತಾರಾಷ್ಟ್ತ್ರೀಯ ಮಕ್ಕಳ ಚಿತ್ರೋತ್ಸವ