ಹಿರಿಯ ನಟ ಉಮೇಶ್ ಸಿನಿಮಾ ಬದುಕಿಗೆ ಮುಂದಿನ ವರ್ಷ 50 ವರ್ಷ ತುಂಬುತ್ತಿದೆ. ಮಕ್ಕಳ ರಾಜ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ ಉಮೇಶ್ ಚಿತ್ರಯಾತ್ರೆ ನಿರಾಂತಕವಾಗಿ ಸಾಗಿದೆ. ಅವರು ರಂಗಭೂಮಿ ಪ್ರವೇಶಿಸಿ 60 ವರ್ಷವಾಯ್ತು. ತಮ್ಮ ನಾಲ್ಕನೇ ವರ್ಷದಲ್ಲಿ ನಾಟಕಕ್ಕೆ ಬಣ್ಣ ಹಚ್ಚಿದವರು ಉಮೇಶ್.
ಅಂದಿನ ಕಪ್ಪು ಬಿಳುಪು ಜಗತ್ತಿನಿಂದ ಇಲ್ಲಿಯವರೆಗಿನ ಕನ್ನಡ ಚಿತ್ರರಂಗದ ಯಾತ್ರೆ ಅದ್ಬುತ. ಈ ಯಶಸ್ಸಿನ ಹಾದಿಯನ್ನು ನೋಡಿರುವ ನಾನೇ ಪುಣ್ಯವಂತ. ಇಂಥ ಅಪರೂಪದ ಸಂದರ್ಭದಲ್ಲಿ ಚಿತ್ರರಂಗವನ್ನು ಕಟ್ಟಿಬೆಳೆಸಿದ ಹಿರಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎನ್ನುತ್ತಾರೆ ಉಮೇಶ್. ಇವರು ಈ ವರೆಗೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ರಮೇಶ್ ನಿರ್ದೇಶನದ ವೆಂಕಟ ಇನ್ ಸಂಕಟ ಚಿತ್ರದಲ್ಲಿ ಉಮೇಶ್ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ನಾನು ಅಂಥ ಪಾತ್ರಗಳಲ್ಲಿ ನಟಿಸಿಲ್ಲ. ಪಾತ್ರದ ಬಗ್ಗೆ ಮಾತ್ರ ನನ್ನಲ್ಲಿ ಏನನ್ನು ಕೇಳಬೇಡಿ ಎಂದು ತಮ್ಮ ಪಾತ್ರದ ವಿಶೇಷತೆಯನ್ನು ಮುಚ್ಚಿಡುತ್ತಾರೆ ಉಮೇಶ್. ಉಮೇಶ್‌ಗೆ ಉಪೇಂದ್ರರ ದುಬೈ ಬಾಬು ಚಿತ್ರದಲ್ಲೂ ಒಂದು ಪಾತ್ರವಿದೆ. ಮಿನುಗು, ಬಿಸಿಲೆ, ಕಲಾಕಾರ್ ಚಿತ್ರಗಳಲ್ಲಿ ಈ ಹಿರಿಯ ನಟನಿಗೆ ಅವಕಾಶವಿದೆ.