ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡವ್ ಏರಿಯಾದಲ್ಲಿ 'ಜಿಂಕೆಮರಿ' ಶ್ವೇತಾ
ಸುದ್ದಿ/ಗಾಸಿಪ್
Feedback Print Bookmark and Share
 
ಕಿರುತೆರೆ ನಿರೂಪಕಿಯಾಗಿದ್ದ ಶ್ವೇತಾ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ನಾಯಕಿಯಾಗಿ ಜಿಂಕೆ ಮರೀನಾ.. ಎಂದು ಕುಣಿದು ತಮ್ಮ ಮೊದಲ ಚಿತ್ರದಲ್ಲೇ ಯಶಸ್ಸು ಕಂಡರು. ಈ ಚಿತ್ರದ ನಂತರ ಈಕೆಗೆ ಅನೇಕ ಅವಕಾಶಗಳು ಬಂದರೂ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಟ್ಟಿದ್ದರಿಂದ ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳಲಿಲ್ಲ. ಸದ್ಯ ಈಕೆ ಚಾಮರಾಜಪೇಟೆ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಂದ ಲವ್ಸ್ ನಂದಿತಾ ಚಿತ್ರಕ್ಕಿಂತ ಈ ಚಿತ್ರ ಸಂಪೂರ್ಣ ಭಿನ್ನ ಪಾತ್ರವಂತೆ. ಜಿಂಕೆ ಮರಿಯಾ ಗ್ಲ್ಯಾಮರ್ ಪಾತ್ರಕ್ಕೂ ಇಲ್ಲಿನ ಗಂಭಿರ ಹುಡುಗಿಯ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ ಎನ್ನುತ್ತಾರೆ ಶ್ವೇತಾ. ಈಕೆಗೆ ನಂದ ಲವ್ಸ್ ನಂದಿತಾ ಚಿತ್ರಕ್ಕಿಂತ ಮೊದಲೇ ಅನೇಕ ಆಫರ್‌ಗಳು ಬಂದಿತ್ತಂತೆ. ಆದರೆ ಮನೆಯಲ್ಲಿ ಹೇಳಲು ಭಯ ಹಾಗೂ ಇವರಿಗೂ ಚಿತ್ರರಂಗದ ಬಗ್ಗೆ ಹೆಚ್ಚು ಕ್ರೇಜ್ ಇಲ್ಲದ್ದರಿಂದ ಒಪ್ಪಿರಲಿಲ್ಲವಂತೆ.

ಈಕೆಗೆ ಕಿರುತೆರೆ ಎಂದರೆ ಈಗಲೂ ತುಂಬಾ ಇಷ್ಟವಂತೆ. ನಾನು ಚಿತ್ರರಂಗಕ್ಕೆ ಬರಲು ನೆರವಾದದ್ದು ಕಿರುತೆರೆ. ಯಾವ ಸಂದರ್ಭದಲ್ಲಿಯೂ ಕಿರುತೆರೆಯನ್ನು ಮರೆಯಲ್ಲ. ಇದು ನನ್ನ ಮೂಲ ಮನೆ ಇದ್ದ ಹಾಗೆ ಎನ್ನುತ್ತಾರೆ ಈ ಜಿಂಕೆ ಮರಿ. ಉತ್ತಮ ಅವಕಾಶಗಳು ಬೇರೆ ಭಾಷೆಯಲ್ಲಿ ಸಿಕ್ಕರು ನಟಿಸುತ್ತೇನೆ ಎನ್ನುವ ಈ ಬೆಡಗಿ, ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರಂತೆ. ಈಗ ಚಾಮರಾಜಪೇಟೆಯಲ್ಲಿ ಹೇಗೆ ಅಡ್ಡಾಡ್ಡಿದ್ದಾರೆ ಎಂಬುದನ್ನು ಕಾದು ನೋಡಬೇಕು. ಯಾಕೆಂದರೆ ಇದು ಡವ್ ಏರಿಯಾ.
MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂದ ಲವ್ಸ್ ನಂದಿತಾ, ಶ್ವೇತಾ, ಚಾಮರಾಜಪೇಟೆ