ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಾಲೇಜು ಹುಡುಗರ ಹಾಲಿಡೇಸ್
ಸುದ್ದಿ/ಗಾಸಿಪ್
Feedback Print Bookmark and Share
 
ಕಾಲೇಜು ಹುಡುಗರ ಕುರಿತ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. ಹರಿದಾಸ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಹಾಲಿಡೇಸ್ ಎಂದು ನಾಮಕರಣ ಮಾಡಲಾಗಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರೀತಿ ಪ್ರೇಮದ ಕಥೆಯಿದು ಎನ್ನುವ ಹರಿದಾಸ್ ಕಥೆಯ ಬಗ್ಗೆ ಯಾವುದೇ ಅಂಶವನ್ನು ಬಿಟ್ಟು ಕೊಡುವುದಿಲ್ಲ.

ನಾಯಕರ ಪಾತ್ರಗಳಲ್ಲಿ ಹೊಸ ಹುಡುಗರ ಪರಿಚಯವಾಗುತ್ತಿದೆ. ಗಾಳಿಪಟಳಿ ಚಿತ್ರದಲ್ಲಿ ನಟಿಸಿದ್ದ ಭಾವನಾರಾವ್, ಮೊಗ್ಗಿನ ಮನಸ್ಸು ಚಿತ್ರದ ಮಾನಸಿ ಪಾತ್ರದಲ್ಲಿ ನಟಿಸಿದ್ದ ಹುಡುಗಿ ನಟಿಸಲಿದ್ದು, ಗಾಳಿಪಟ ಚಿತ್ರದಲ್ಲಿ ನಟಿಸಿದ ರಾಜೇಶ್ ಕೃಷ್ಣನ್ ಹಾಲಿಡೇಸ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ನಿರ್ದೇಶಕ ಹರಿದಾಸ್ ಈ ಹಿಂದೆ ಮಲೆಯಾಳಂ ಸಿನಿಮಾಗಾಗಿ ಕೆಲಸ ಮಾಡಿರುವ ಅನುಭವವಿದೆ. ಇದೀಗ ಮಾಸ್ ಮತ್ತು ಕ್ಲಾಸ್ ವರ್ಗಕ್ಕೆ ಮೆಚ್ಚುಗೆಯಾಗುವಂಥ ಕಥೆ ಹೆಣೆದು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚಿನ ಆದ್ಯತೆಯಿದ್ದು, ಹರಿದಾಸ್ ಬೇರೆ ಬೇರೆ ಸಾಹಿತಿಗಳಲ್ಲಿ 10 ಹಾಡುಗಳನ್ನು ಬರೆಸಿದ್ದಾರೆ. ಎ.ಆರ್. ರೆಹಮಾನ್ನಲ್ಲಿ ಸಹಾಯಕರಾಗಿ ಕೆಲಸ ಮಾಡಿರುವ ಗುರುಪ್ರಸಾದ್ ಹಾಲಿಡೇಸ್‌ಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಸಕಲೇಶಪುರ ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ.
MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿದಾಸ್, ರಾಜೇಶ್ ಕೃಷ್ಣನ್, ಭಾವನಾರಾವ್, ಗುರುಪ್ರಸಾದ್