ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶೋಭರಾಜ್‌ಗೆ ಖುಷಿ ನೀಡಿದ ರೌಡಿ ಪಾತ್ರ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರಗಳಲ್ಲಿ ಕಾಮಿಡಿ-ವಿಲನ್ ಪಾತ್ರ ಮಾಡಿ ಯಶಸ್ವಿಯಾದವರು ಕೆಲವೇ ಕೆಲವರು. ಇದರಲ್ಲಿ ರಂಗಾಯಣ ರಘುವನ್ನು ಬಿಟ್ಟರೆ ನಂತರ ಸ್ಥಾನ ಶೋಭರಾಜ್‌ಗೆ ಸಿಗುತ್ತದೆ. ಇದೀಗ ಶೋಭರಾಜ್ ಶಿವಮಣಿ ಚಿತ್ರದಲ್ಲಿ ಮತ್ತೊಮ್ಮೆ ಅಂಥ ಪಾತ್ರ ಮಾಡಿದ್ದಾರೆ.

ತೀರಾ ಎಳೇ ಮಗುವಂತೆ ಆಡುವ ಆಳೆತ್ತರದ ರೌಡಿಯಾಗಿ ಕಾಣಿಸಿಕೊಳ್ಳುವ ಪಾತ್ರ ಅವರಿಗೆ ತುಂಬಾ ಖುಷಿ ಕೊಟ್ಟಿದೆಯಮತೆ. ಕೆಲವೇ ದಿನಗಳಲ್ಲಿ ಚಿತ್ರ ತೆರೆಕಾಣುತ್ತಿದ್ದು, ಪ್ರೇಕ್ಷಕರು ತಮ್ಮ ಪಾತ್ರವನ್ನು ಗುರುತಿಸಲಿದ್ದಾರೆ ಎನ್ನುತ್ತಾರವರು. ಇವರು ವಿಷ್ನುವರ್ಧನ್ ಅವರ ನಾನೇ ಬೇರೆ ನನ್ನ ಸ್ಟೈಲೇ ಬೇರೆ, ಯುವ ಹಾಗೂ ಪರಿಚಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಖಳನಾಯಕನ ಪಾತ್ರಗಳ ಏಕತಾನತೆಯಿಂದ ಬೇಸತ್ತ ಇವರಿಗೆ ಇಂತಹ ವಿಶಿಷ್ಟ ಪಾತ್ರಗಳು ನೆಮ್ಮದಿ ಕೊಡುತ್ತವಂತೆ, ಯುವದಲ್ಲಿ ಅವರು ಪೊಲೀಸ್ ಇನ್‌ಸ್ಪೆಕ್ಟರ್, ಪರಿಚಯದಲ್ಲಿನ ಪತ್ತೇದಾರನ ಪಾತ್ರದಲ್ಲಿ ಪ್ರೇಕ್ಷಕರನ್ನು ನಗಿಸಲಿದ್ದಾರೆ. ವಿಜಯ್‌ರ ತಾಕತ್ ದರ್ಶನ್‌ರ ರಾಮ್ ಸದ್ಯ ಚಿತ್ರೀಕರಣದಲ್ಲಿರುವ ಶೋಭರಾಜ್ ಚಿತ್ರಗಳು. ಶೋಭರಾಜ್‌ಗೆ ಬಹುತಾರಾಗಣದ ಕನ್ನಡ ಚಿತ್ರವೊಂದನ್ನು ನಿರ್ಮಿಸುವ ಕನಸು ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಂಗಾಯಣ ರಘು, ಶೋಭರಾಜ್, ಶಿವಮಣಿ, ನಾನೇ ಬೇರೆ ನನ್ನ ಸ್ಟೈಲೇ ಬೇರೆ ತಾಕತ್ ರಾಮ್