ಒಂದು ಸಮಯದಲ್ಲಿ ಖಳನಟನಾಗಿ ಅದ್ಬುತ ಅಭಿನಯ ನೀಡಿ 'ರೇಪ್ ಸ್ಪೆಷಲಿಸ್ಟ್' ಎಂಬ ಹೆಸರು ಪಡೆದಿದ್ದ ಖಳನಟ ಕೀರ್ತಿರಾಜ್‌ಗೆ ಈಗ ಅವಕಾಶಗಳು ಸಿಗುತ್ತಿಲ್ಲ. ಏನಿದ್ದರೂ ಬಾಲಿವುಡ್‌ನಿಂದ ಖಳನಟರನ್ನು ತರಿಸುತ್ತಾರೆ. ಈಗ ಕೀರ್ತಿರಾಜ್ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸಿಹಿ ಕಹಿ ಚಂದ್ರು ಬಳಗದ 'ಬದುಕು ಮಾಯೆಯಲ್ಲ' ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.
ಒಂದು ಸಮಯದಲ್ಲಿ ದಿನಕ್ಕೆ ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದ ಅವರಿಗೆ ಈಗ ಹಿರಿತೆರೆಯಲ್ಲಿ ಅವಕಾಶ ಕಡಿಮೆಯಾಗುತ್ತಿದೆ. ಈ ಬಗ್ಗೆ ಕೀರ್ತಿ ಅವರನ್ನು ಪ್ರಶ್ನಿಸಿದರೆ, ಎಲ್ಲಾ ಬಾಲಿವುಡ್ ಖಳರ ಮಾಯೆ. ಮಾತೆತ್ತಿದ್ದರೆ ಮುಕೇಶ್ ರಿಷಿ, ರಾಹುಲ್ ರಾಯ್ ಎಂದು ರಾಗ ಎಳೆಯುತ್ತಾರೆ. ನಮ್ಮ ಅನ್ನಕ್ಕೆ ಮತ್ತಷ್ಟು ಸೇರಿಸಿ ಅವರಿಗೆ ಬಡಿಸುತ್ತಾರೆ ಎಂದು ತಮ್ಮ ನೋವನ್ನು ಕೀರ್ತಿರಾಜ್ ತೋಡಿಕೊಳ್ಳುತ್ತಾರೆ.
ಕೀರ್ತಿರಾಜ್ ನಟಿಸಿದ ಕೊನೆಯ ಚಿತ್ರ ವೆಂಕಟ್ ನಿರ್ದೇಶನದ ಸ್ವತಂತ್ರ ಪಾಳ್ಯ. ಅದು ಇನ್ನೂ ಬಿಡುಗಡೆಯಾಗಿಲ್ಲ. ಹೊಸ ವರ್ಷದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಇವರ ಮಗ ಧರ್ಮ ನವಗ್ರಹ ಚಿತ್ರದಲ್ಲಿ ನಟಿಸಿದ್ದರು. ಇವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೂಡಾ ವ್ಯಕ್ತವಾಗಿದ್ದವು. ಈಗ ನಾಗೇಂದ್ರ ಅರಸ್ ನಿರ್ದೇಶನದ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಜನವರಿಯಲ್ಲಿ ಈ ಚಿತ್ರ ಸೆಟ್ಟೇರಲಿದೆ. ಮಗನಿಗೆ ಬೇಡಿಕೆ ಬರುತ್ತಿದೆ. ಆದರೆ ಅಪ್ಪನ ಬೇಡಿಕೆ...