ಈಗ ಟಿವಿ ಪರದೆಯಲ್ಲಿ ರಿಯಾಲಿಟಿ ಶೊಗಳದ್ದೇ ಕಾರುಬಾರು. ಸ್ಟಾರ್ ಸಿಂಗರ್ ಸೇರಿದಂತೆ ಅನೇಕ ಸ್ಪರ್ಧೆಗಳು ನಡೆಯುತ್ತಿವೆ. ಇದರಲ್ಲಿ ಸಂಗೀತ ನಿರ್ದೇಶಕರು, ಖ್ಯಾತ ಗಾಯಕರು ತೀರ್ಪುಗಾರರಾಗಿರುತ್ತಾರೆ. ಇಂತಹ ರಿಯಾಲಿಟಿ ಶೊಗಳಿಂದ ಪ್ರತಿಭೆಗಳು ಬೆಳಕಿಗೆ ಬರಲು ಸಾದ್ಯ ಎನ್ನುವುದು ಸಂಗೀತ ನಿರ್ದೇಶಕ ಗುರುಕಿರಣ್ ಅಭಿಪ್ರಾಯ.
ಸ್ಟಾರ್ ಸಿಂಗರ್ ಕಾರ್ಯಕ್ರಮವೊಂದರಲ್ಲಿಯೇ ಕನಿಷ್ಠ ಐದಾರು ಮಂದಿ ಪ್ರತಿಭೆಗಳು ಬೆಳಕಿಗೆ ಬರಲಿದೆ. ಈಗಾಗಲೇ ನನ್ನ ಚಿತ್ರಗಳ ಮೂಲಕವೇ ಮೂರು ಸ್ಪರ್ಧಿಗಳಿಗರೆ ಅವಕಾಶ ನೀಡಿದ್ದೇನೆ. ಇನ್ನು ಇಬ್ಬರಿಗೆ ಅವಕಾಶ ನೀಡುವ ಮೂಲಕ ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶ ನನಗಿದೆ ಎನ್ನುತ್ತಾರೆ ಗುರುಕಿರಣ್.
ಈ ವರ್ಷ ಗುರುಕಿರಣ್ ಹೆಚ್ಚಿನ ಚಿತ್ರಗಳಿಗೆ ಸಂಗೀತ ನೀಡಿಲ್ಲ. ಅವರೇನಿದ್ದರೂ ರಿಯಾಲಿಟಿ ಶೊಗಳಲ್ಲಿ ತೀರ್ಪುಗಾರರರಾಗಿ ಬಿಜಿಯಾಗಿದ್ದರು. ಇನ್ನೊಂದೆರಡು ತಿಂಗಳಲ್ಲಿ ಈ ಸ್ಪರ್ಧೆ ಮುಗಿಯಲಿದ್ದು, ನಂತರ ತಮ್ಮನ್ನು ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಚಿತ್ರರಂಗಕ್ಕೆ ಎಷ್ಟೇ ಹೊಸ ಮುಖಗಳ ಆಗಮನವಾದರೂ ಇಲ್ಲಿ ಪ್ರತಿಭೆಯುಳ್ಳವರು ಮಾತ್ರ ಉಳಿಯುತ್ತಾರೆ ಎಂಬುದು ಗುರು ಕಂಡುಕೊಂಡ ಸತ್ಯ. ಅವರು ಸಂಗೀತ ನೀಡಿರುವ ಕೆಂಪ, ಗುಲಾಮ, ಭೀಮೂಸ್.., ತಾಕತ್ತು ಚಿತ್ರಗಳು ಬಿಡುಗಡೆಯಾಗಬೇಕಿದೆ.
ಅಂದಹಾಗೆ ಸೈಕೋ ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ಗೆ ಮೊದಲ ಬಾರಿಗೆ ಇವರ ಪಾಂಚಾಲಿ ಚಿತ್ರದಲ್ಲಿ ಹಾಡಲು ಅವಕಾಶ ಕೊಟ್ಟರಂತೆ.