ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿಹಿಮುತ್ತಿನ ನಿರೀಕ್ಷೆಯಲ್ಲಿ ಧ್ಯಾನ್
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್‌ನಿಂದ ಹಾರಿ ಬಂದು ಕನ್ನಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಚಾಕಲೇಟ್ ಹೀರೋ ಧ್ಯಾನ್ ಈಗ ಸಿಹಿಮುತ್ತಿನ ನೀರೀಕ್ಷೆಯಲ್ಲಿದ್ದಾರೆ. ಇವರು ಬಹು ನೀರೀಕ್ಷೆ ಇಟ್ಟಿದ್ದ ಶಿವಧ್ವಜ್ ನಿರ್ದೇಶನದ 'ನೀನೇ ನೀನೇ' ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತೇ ಹೊರತು, ಚಿತ್ರ ಮಾತ್ರ ಗೆಲ್ಲಲಿಲ್ಲ.

ಈಗ ಸಿಹಿಮುತ್ತು ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿಹಿಮುತ್ತು ಒಂದು ಕೌಟುಂಬಿಕ ಚಿತ್ರ. ಹಿಂದಿನ ಚಿತ್ರಗಳ ಪಾತ್ರಗಳಿಗಿಂತ ನನಗೆ ಇಲ್ಲಿ ಸಂಪೂರ್ಣ ಭಿನ್ನ ಪಾತ್ರ. ನಟ ಪ್ರೇಮ್ ಕೂಡಾ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಖಂಡಿತವಾಗಿಯೂ ಕನ್ನಡದಲ್ಲಿ ನನಗೆ ಮತ್ತೊಂದು ಯಶಸ್ಸು ತಂದು ಕೊಡುತ್ತದೆ. ಈಗ ತಮಿಳು ಚಿತ್ರವೊಂದರಲ್ಲಿಯೂ ನಟಿಸುತ್ತಿದ್ದೇನೆ ಎಂದರು ಧ್ಯಾನ್.

ಕನ್ನಡ ಚಿತ್ರರಂಗಕ್ಕೆ ಬಂದ ಮೇಲೆ ಧ್ಯಾನ್‌ಗೆ ಇತರ ಭಾಷಾ ಚಿತ್ರಗಳಲ್ಲೂ ಅವಕಾಶ ಸಿಕ್ಕಿದೆ. ಇದರಿಂದ ಧ್ಯಾನ್ ತುಂಬಾ ಖುಷಿಯಾಗಿದ್ದಾರೆ. ಕನ್ನಡ ಚಿತ್ರರಂಗ ನನಗೆ ತವರು ಮನೆ ಇದ್ದಂತೆ. ಇಲ್ಲಿನ ಅವಕಾಶಗಳೀಗ ಬಾಲಿವುಡ್‌ಗೆ ದಾರಿ ಮಾಡಿಕೊಟ್ಟಿದೆ. ಹಿಂದಿಯಲ್ಲಿ ನಾನು ನಾಯಕನಾಗಿ ನಟಿಸಲಿರುವ ನಾಲ್ಕನೇ ಚಿತ್ರ ಸದ್ಯದಲ್ಲಿಯೇ ಸೆಟ್ಟೇರಲಿದೆ ಎನ್ನುತ್ತಾರೆ ಈ ಚಾಕಲೇಟ್ ಹೀರೋ.
MOKSHENDRA

ಸಿಹಿಮುತ್ತು ಚಿತ್ರದಲ್ಲಿ ಧ್ಯಾನ್, ನಾಯಕಿ ಪೂಜಾ ಚೋಪ್ರಾ ಮತ್ತು ಪ್ರೇಮ್
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಹಿಮುತ್ತು, ನೀನೇ ನೀನೇ, ಧ್ಯಾನ್