ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುಂದೂಡಿದ ಹಾಗೆ ಸುಮ್ಮನೆ
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರೀತಂ ಗುಬ್ಬಿ ನಿರ್ದೇಶನದ ಬಹು ನಿರೀಕ್ಷೆಯ ಹಾಗೆ ಸುಮ್ಮನೇ ಚಿತ್ರ ಇದೇ ಶುಕ್ರವಾರ ಬಿಡುಗಡೆ ಕಾಣಬೇಕಿತ್ತು. ಆದರೆ ಸಿನಿಮಾ ಮಂದಿರದ ಅಭಾವದಿಂದ ಚಿತ್ರ ಬಿಡುಗಡೆ ಮುಂದೆ ಹೋಗಿದೆ.

ಅಲ್ಲದೆ, ಚಿತ್ರದ ಫಸ್ಟ್ ಪ್ರಿಂಟ್ ಬರುವುದು ತಡವಾಗಿರುವುದರಿಂದಲೂ ಚಿತ್ರ ಬಿಡುಗಡೆ ಮುಂದೂಡಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಚಿತ್ರಕ್ಕೆ ಇನ್ನು ಸೆನ್ಸಾರ್ ಮುಂದೆ ಹೋಗಿಲ್ಲ. ಇವೆಲ್ಲಾ ಕಾರಣದಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ.

ಉತ್ತಮ ಹಾಸ್ಯ, ಹಾಡು ಹಾಗೂ ಯುವ ಪ್ರೇಮಿಗಳ ತುಂಟಾಟದ ಸನ್ನಿವೇಶಗಳಿಂದ ಈ ಚಿತ್ರವನ್ನು ಯುವಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ನಿರ್ದೇಶಕ ಪ್ರೀತಂ ಗುಬ್ಬಿ ಅವರಿಗಿದೆ. ಕೇವಲ 35 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದಲ್ಲಿ ಕಿರಣ್ ನಾಯಕರಾಗಿ, ಮುಂಬೈ ಬೆಡಗಿ ಸುಹಾಸಿ ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಗೆ ಸುಮ್ಮನೆ, ಪ್ರೀತಂ ಗುಬ್ಬಿ, ಸಿನಿಮಾ