ಹಿರಿಯ ನಟ ದತ್ತಣ್ಣ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರಮೇಶ್ ನಿರ್ದೇಶನದ ವೆಂಕಟ ಇನ್ ಸಂಕಟದಲ್ಲಿ ದತ್ತಣ್ಣ ಅವರು ಕಾಲೇಜು ಪ್ರಿನ್ಸಿಪಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟನ ಎಡವಟ್ಟುಗಳಿಗೆ ಪ್ರಿನ್ಸಿಪಾಲ್ ಸಾಕ್ಷಿಯಾಗುತ್ತಾರಂತೆ.
ಗಂಭೀರ ಪಾತ್ರಗಳತ್ತ ಹೆಚ್ಚು ಒಲವು ತೋರಿರುವ ದತ್ತಣ್ಣ ಇದೀಗ ಕಾಮಿಡಿಯಲ್ಲೇ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಮೋಹನ್ ನಿರ್ದೇಶನದ ಕೃಷ್ಣಾ ನೀ ಲೇಟಾಗ್ ಬಾರೋ ಚಿತ್ರದಲ್ಲಿ ದತ್ತಣ್ಣ ಮತ್ತೊಂದು ಕಾಮಿಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಶಿವರಾಜ್ ಕುಮಾರ್ ನಿರ್ದೇಶನದ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ದತ್ತಣ್ಣ ಅಭಿನಯಿಸುತ್ತಿದ್ದಾರೆ.
ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿಕೊಂಡಿದ್ದ ದತ್ತಣ್ಣ ಚಿತ್ರರಂಗದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಕಳೆದೆರಡು ವರ್ಷಗಳಿಂದ ನಾಟಕಗಳಲ್ಲಿ ಆರೋಗ್ಯ ಸಮಸ್ಯೆಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಇದೆ ಎನ್ನುತ್ತಾರೆ ಅವರು.