ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಲ್ಲಾಸದ ಉತ್ಸಾಹಕ್ಕೆ ಸಿಕ್ಕಳು ಯಾಮಿ
ಸುದ್ದಿ/ಗಾಸಿಪ್
Feedback Print Bookmark and Share
 
ಉಲ್ಲಾಸದ ಉತ್ಸಾಹ ಚಿತ್ರಕ್ಕೆ ಕೊನೆಗೂ ನಾಯಕಿ ಸಿಕ್ಕಿದ್ದಾಳೆ. ಮುಂಬೈ ಬೆಡಗಿ ಯಾಮಿ ಗೌತಮ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಹಿಂದಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಯಾಮಿ, ಗಣೇಶ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ಗೌತಮ್ ಯಾಮಿ ಇದೀಗ ಕಿರುತೆರೆಯಿಂದ ಹಿರಿತೆರೆಗೆ ಬಂದಿದ್ದಾರೆ.

ಈ ಮೊದಲು ಮುಂಬೈನ ಇನ್ನೊರ್ವ ಬೆಡಗಿ ಶ್ರದ್ದಾ ಆರ್ಯ ಚಿತ್ರದ ನಾಯಕಿ ಎಂದು ಹೇಳಲಾಗಿತ್ತು. ಚಿತ್ರೀಕರಣದ ವೇಳೆ ಶ್ರದ್ದಾ ಓಡಿಹೋಗಿದ್ದರು ಎಂಬ ಗುಲ್ಲು ಎಲ್ಲೆಡೆ ಹಬ್ಬಿತ್ತು. ಆದರೆ ಇದೆಲ್ಲ ಸುಳ್ಳು, ಚಿತ್ರಕ್ಕೆ ನಾಯಕಿಯೇ ಆಯ್ಕೆಯಾಗಿಲ್ಲ ಎಂದು ನಟ ಗಣೇಶ್ ಸ್ಪಷ್ಟಪಡಿಸಿದ್ದರು. ಈ ಚಿತ್ರ ತೆಲುಗಿನ ಉಲ್ಲಾಸಂಗ ಉತ್ಸಾಹಂಗ ಚಿತ್ರದ ರಿಮೇಕ್ ಚಿತ್ರವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಾಮಿ ಗೌತಮ್, ಗಣೇಶ್, ಉಲ್ಲಾಸದ ಉತ್ಸಾಹ