ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸದ್ದಿಲ್ಲದೆ ಮಿಂಚಾಗಿ ಬಂದ ಚಿತ್ರ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಶಿವಾನಿ ಚಿತ್ರದ ನಿರ್ದೇಶಕರಾದ ವಿಶಾಲ್ ರಾಜ್ ಸದ್ದಿಲ್ಲದೆ ಇನ್ನೊಂದು ಸಿನಿಮಾ ಸಿದ್ದಪಡಿಸಿದ್ದು, ಇದೀಗ ಬಿಡುಗಡೆಗೆ ಕಾದಿದೆ. ಚಿತ್ರದ ಹೆಸರು ಮಿಂಚು.

ಈಗಾಗಲೇ ಚಿತ್ರಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗಷ್ಟೇ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿತು. ಸಿದ್ದಾಂತ್ ಎಂಬ ಹೊಸ ಪ್ರತಿಭೆಯನ್ನು ಈ ಚಿತ್ರದ ಮೂಲಕ ನಿರ್ದೇಶಕರು ಪರಿಚಯಿಸುತ್ತಿದ್ದಾರೆ. ನಾಯಕಿಯಾಗಿ ಮುಂಬೈ ಬೆಡಗಿ ಜೋನಿತಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕರು ಹೊಸಬರೆ. ವೇಣುಗೋಪಾಲ್ ನಿರ್ಮಾಣದ ಚೊಚ್ಚಲ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಚಿತ್ರಕ್ಕೆ ರಾಜೇಶ್ ರಾಮನಾಥ್ ಹಾಗೂ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಐದು ಹಾಡುಗಳು ಚಿತ್ರದಲ್ಲಿದೆ. ಜತೆಗೆ ಐದು ಫೈಟುಗಳೂ ಇವೆ. ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಚಿತ್ರ ಬಿಡುಗಡೆ ಕಾಣಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಿಂಚು, ವಿಶಾಲ್ ರಾಜ್, ಸಿದ್ದಾಂತ್, ಜೋನಿತಾ