ತೇಜಸ್‌ರ ಮೀಸೆ ಚಿಗುರಿದಾಗ

ಮೀಸೆ ಚಿಗುರಿದಾಗ ಚಿತ್ರದ ನಾಯಕ ತೇಜಸ್‌ಗೆ ಈಗ ನಿಜಕ್ಕೂ ಮೀಸೆ ಬಂದಿದೆ. ಮೊದಲ ಚಿತ್ರಕ್ಕೆ ಆಯ್ಕೆಯಾದ ಬೆನ್ನಲ್ಲೆ ತಮಿಳಿನ ಖ್ಯಾತ ನಿರ್ಮಾಪಕ ಕೆ.ಟಿ. ಕುಂಜುಮನ್ ಕಣ್ಣಿಗೆ ಬಿದ್ದು ಅವರ ಕಾದಲಕ್ಕು ಮರಣಂ ಇಲ್ಲೈ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಕಂತು ಮುಗಿಸಿ ಬಂದಿದ್ದಾರೆ.ಪ್ರವೀಣ್ ನಾಯಕ್ ಅವರ ಮೀಸೆ ಚಿಗುರಿದಾಗ ಚಿತ್ರಕ್ಕೆ ತೇಜಸ್ ನಾಯಕರಾಗಿ ಆಯ್ಕೆಯಾಗಿದ್ದರು. ಆಗಲೇ ಕನ್ನಡದಲ್ಲಷ್ಟೇ ಅಲ್ಲ, ಇತರ ಭಾಷೆಗಳಲ್ಲಿಯೂ ತೇಜಸ್ ಸಾಕಷ್ಟು ಆಫರ್‌ಗಳು ಬಂದಿವೆ. ಇಂಜಿನಿಯರಿಂಗ್ ಮುಗಿಸಿ ಇನ್ಪೊಸಿಸ್‌ನಲ್ಲಿ ಕೆಲಸ ನಿರ್ವಹಿಸಿದ ತೇಜಸ್ ಬಣ್ಣದ ಲೋಕಕ್ಕೆ ಕಾಲಿಟ್ಟರು.ತೇಜಸ್ ಚಿತ್ರರಂಗಕ್ಕೆ ಪರಿಚಯಿಸಿದ ಬಗ್ಗೆ ಹೇಳಿಕೊಂಡರು, ಚಿತ್ರರಂಗಕ್ಕೆ ಬಂದಿದ್ದು ಪತ್ರಿಕಾ ಛಾಯಾಗ್ರಾಹಕ ಕೆ.ಎನ್. ನಾಗೇಶ್ ಕುಮಾರ್ ಹಾಗೂ ನಿರ್ದೇಶಕ ಪ್ರವೀಣ್ ನಾಯಕ್ ಅವರ ಸಹಾಯದಿಂದ. ನಾನು ಲೇಟ್ ಆಗಿ ಬಂದಿದ್ದೇನೆ ಎಂಬುದು ಸತ್ಯ. ಆದರೆ ಲೇಟೆಸ್ಟ್ ಆಗಿ ಬರಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಉದ್ಯೋನ್ಮುಖ ನಟ ತೇಜಸ್.