ಸೂರಿ ನಿರ್ದೇಶನದ ಬಹು ನಿರೀಕ್ಷಿತ ‘ಜಂಗ್ಲಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಮೊದಲ ಬಾರಿಗೆ ವಿಜಯ್ ಸಿಕ್ಸ್ ಪ್ಯಾಕ್ ಆಬ್ಸ್ ತೋರಿಸಿರುವುದಲ್ಲದೆ ಸಖತ್ ಫೈಟ್, ಪಂಚಿಂಗ್ ಡೈಲಾಗಗಳು ಚಿತ್ರದಲ್ಲಿದೆ. ಅಂತೂ ಬಾಲಿವುಡ್‌ನ ಸಿಕ್ಸ್ ಪ್ಯಾಕ್ ಕ್ರೇಜ್ ಕನ್ನಡಕ್ಕೂ ತಟ್ಟಿದೆ ಎಂದಾಯ್ತು.
ನಿರ್ದೇಶಕ ಸೂರಿ ಹಾಗೂ ನಾಯಕ ವಿಜಯ್ ಇಬ್ಬರೂ ಯಶಸ್ಸಿನ ಒಂದೇ ಹಾದಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದಲೇ ಸೂರಿ ಹೆಚ್ಚು ಮಾತನಾಡದೇ ಕೆಲಸ ಮಾಡಿದ್ದಾರೆ. ಅಲ್ಲದೆ, ಜಂಗ್ಲಿ ಚಿತ್ರವನ್ನು ಹೆಚ್ಚು ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಚಿತ್ರ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ.
ಹಿಂದಿಯ ಶಾರುಖ್ ಖಾನ್ ಓಂ ಶಾಂತಿ ಓಂ ಚಿತ್ರದಲ್ಲಿ ಹೇಗೆ ಸಿಕ್ಸ್ ಪ್ಯಾಕ್ ತೋರಿಸಿದ್ದರೋ ಅದೇ ರೀತಿ ಹಾಡೊಂದರಲ್ಲಿ ವಿಜಯ್ ತಮ್ಮ ದೇಹದ ಕಸರತ್ತು ತೋರಿಸುತ್ತಾರೆ ಎಂದು ಈ ಹಾಡಿಗೆ ನೃತ್ಯ ಸಂಯೋಜಿಸಿರುವ ಇಮ್ರಾನ್ ಸರ್ದಾರಿಯಾ ಅವರ ಅಭಿಪ್ರಾಯ. ಚಿತ್ರಕ್ಕೆ ಅಂದ್ರಿತಾ ರೇ ನಾಯಕಿ. ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.