ಬಿ. ಸುರೇಶ್ ನಿರ್ಮಾಣದ ‘ಗುಬ್ಬಚ್ಚಿಗಳು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದವರು ಅಭಯ್ ಸಿಂಹ. ಚೊಚ್ಚಲ ನಿರ್ದೇಶನದಲ್ಲೇ ಅಭಯ್ ಭರವಸೆ ಮೂಡಿಸಿದ್ದಾರೆ. ಚಿತ್ರದಲ್ಲಿ ಪರಿಸರದ ಕಥೆಯ ವಿಶಿಷ್ಟವಾಗಿ ರೂಪುಗೊಂಡಿದ್ದಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿತ್ತು.
ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಅಭಯ್ ಕೂಡ ಪಾಲ್ಗೊಂಡಿದ್ದರಂತೆ. ಭಾರತದಿಂದ ಆ ಚಿತ್ರೋತ್ಸವದಲ್ಲಿ ಆಯ್ಕೆಯಾದ ಎರಡು ಚಿತ್ರಗಳಲ್ಲಿ ಗುಬ್ಬಚ್ಚಿಗಳು ಒಂದು.
ಈಗ ಅಭಯ್ ವ್ಯಾಪಾರಿ ಚಿತ್ರಗಳತ್ತ ದೃಷ್ಟಿ ನೆಟ್ಟಿದ್ದಾರೆ. ಕಮರ್ಷಿಯಲ್ ಹಾದಿಯಲ್ಲಿ ವಿಭಿನ್ನ ಕತೆಯನ್ನು ಒಳಗೊಂಡಿರುವ ಈ ಚಿತ್ರಕ್ಕೆ ಎರಡು ಸ್ಕ್ರಿಪ್ಟ್ ಸಿದ್ಧವಾಗಿದೆ. ಚಿತ್ರಕ್ಕೆ ಇನ್ನು ಹೆಸರು ಸಿಕ್ಕಿಲ್ಲ. ಮುಂಬೈ ದಾಳಿಯೇ ಚಿತ್ರಕ್ಕೆ ಸ್ಪೂರ್ತಿಯಂತೆ. ಇನ್ನೊಂದು ಚಿತ್ರ 1945ರ ಸಂದರ್ಭದ ಒಂದು ಕತೆಯನ್ನು ಆಧಾರವಾಗಿಟ್ಟುಕೊಂಡು ಸ್ಕ್ರಿಪ್ಟ್ ಸಿದ್ದಪಡಿಸಿದ್ದಾರೆ. ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.