ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದೀಪಕ್‌ಗೆ ನಾಯಕಿ ಕಂಗನಾ ರಾಣಾವತ್ ?
ಸುದ್ದಿ/ಗಾಸಿಪ್
Feedback Print Bookmark and Share
 
ಆ ದಿನಗಳು ಚಿತ್ರಗಳ ಮೂಲಕ ಹಲವು ನಟರು, ತಂತ್ರಜ್ಞರು ಬೆಳಕಿಗೆ ಬಂದರು. ನಾಯಕ ಚೇತನ್ ಗೆ ಹೆಚ್ಚು ಪ್ರಸಿದ್ಧಿ ತಂದು ಕೊಟ್ಟ ಚಿತ್ರ ಇದು. ಇದೀಗ ಅದರಲ್ಲಿ ಬಚ್ಚನ್ ಪಾತ್ರದಲ್ಲಿ ಕಾಣಿಸಿಕೊಂಡ ದೀಪಕ್ ಈಗ ನಾಯಕ ನಟರಾಗುತ್ತಿದ್ದಾರೆ.

ಸಿಕ್ಸರ್, ಮೊಗ್ಗಿನ ಮನಸು ಖ್ಯಾತಿಯ ಶಶಾಂಕ್ ಚಿತ್ರದ ನಿರ್ದೇಶಕರು. ಈ ಚಿತ್ರದ ಮೂಲಕ ಇ. ಕೃಷ್ಣಪ್ಪ ಅವರ ಇಕೆ ಎಂಟಪ್ರೈಸಸ್ ನ ಗಂಗಾಧರ್ ಸ್ವತಃ ನಿರ್ಮಾಣಕ್ಕೆ ಇಳಿಯಲಿದ್ದಾರೆ. ಚಿತ್ರದ ಹೆಸರು ‘ಇಕೆ ಪಿಕ್ಚರ್ಸ್’.

ದೀಪಕ್ ಅಮೆರಿಕ ರಿಟರ್ನ್ಡ್. ಅಮೆರಿಕಾದಲ್ಲೇ ಅಭಿನಯ, ಮಾರ್ಷೆಲ್ ಆರ್ಟ್ಸ್, ಡ್ಯಾನ್ಸ್ ತರಬೇತಿ ಪಡೆದಿರುವ ದೀಪಕ್, ಶಶಾಂಕ್ ಅವರ ಹಿಂದಿನ ಚಿತ್ರ ಮೊಗ್ಗಿನ ಮನಸು ಚಿತ್ರಕ್ಕೆ ಅವಕಾಶ ನಿರೀಕ್ಷಿಸಿದ್ದರು. ಆದರೆ ಚಿತ್ರದ ಯಾವ ಪಾತ್ರವೂ ಅವರಿಗೆ ಒಗ್ಗದ್ದರಿಂದ ಮುಂದೆ ಅವಕಾಶ ಕೊಡುವುದಾಗಿ ತಿಳಿಸಿದ್ದರು. ಇದೀಗ ಸಂಪೂರ್ಣ ಆಕ್ಷನ್ ಓರಿಯೆಂಟೆಡ್ ಚಿತ್ರಕ್ಕೆ ಹೈ ವೋಲ್ಡೇಜ್ ಹಿರೋ ಪಾತ್ರಕ್ಕೆ ದೀಪಕ್ ಅವರೇ ಸೂಕ್ತ ಎನಿಸಿ ಕರೆತಂದಿದ್ದಾರೆ.

ಚಿತ್ರದಲ್ಲಿ ವಿವಿಧ ಮೂರು ಗೆಟಪ್ ಗಳಲ್ಲಿ ದೀಪಕ್ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮಾತುಕತೆಯಾಗಿಲ್ಲ. ಚಿತ್ರಕ್ಕೆ ವಿ. ಶ್ರೀಧರ್ ಸಂಗೀತ ನಿರ್ದೇಶಿಸುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೀಪಕ್, ಶಶಾಂಕ್, ಇ ಕೃಷ್ಣಪ್ಪ, ಕಂಗನಾ ರಾಣಾವತ್