ಶಂಕರ್ ನಾಗ್ ನೆನಪು ಮತ್ತೆ ಮತ್ತೆ ಕಾಡುತ್ತಿದ್ದೆ. ಇದೀಗ ಹಿರಿಯ ನಟ ಶ್ರೀನಿವಾಸ್ ಪ್ರಭು ಮತ್ತೆ ನೆನಪಿಸುತ್ತಾರೆ. ಶಂಕರ್ ಇದ್ದಿದ್ರೆ ನಮ್ಮೆನ್ನೆಲ್ಲಾ ಸುಮ್ಮನಿರಲು ಬಿಡುತ್ತಿರಲಿಲ್ಲ. ಸದಾ ಚಟುವಟಿಕೆಯಿಂದಿರುತ್ತಿದ್ದವನು, ಇದ್ದಕ್ಕಿದ್ದಂತೆ ಹೋಗಿಬಿಟ್ಟ. ಕನ್ನಡ ಚಿತ್ರರಂಗಕ್ಕೆ 75 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಶಂಕರ್ ನಮ್ಮೊಂದಿರಬೇಕಿತ್ತು ಎಂದು ಗೆಳೆಯನನ್ನು ನೆನೆಯುತ್ತಾರೆ ಶ್ರೀನಿವಾಸ್ ಪ್ರಭು.
ಆಕ್ಸಿಡೆಂಟ್ ಸೇರಿದಂತೆ ಮತ್ತೆ ಕೆಲವು ಚಿತ್ರಗಳಲ್ಲಿ ಹಾಗೂ ರಂಗಭೂಮಿಯಲ್ಲಿ ಶಂಕರ್ ನಾಗ್ ಜೊತೆ ಕೆಲಸ ಮಾಡಿದ್ದನ್ನು ನೆನೆದು ಭಾವುಕರಾಗುತ್ತಾರೆ.
ಶಂಕರ್ ಇದ್ದಿದ್ರೆ ನಾನು ಹೆಚ್ಚು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ವಿಶಿಷ್ಟ ಸಿನಿಮಾಗಳು ತಯಾರಾಗುತ್ತಿದ್ದವು ಎಂಬುದು ಅವರ ಅಂಬೋಣ. ಶ್ರೀನಿವಾಸ್ ಬಹುದೊಡ್ಡ ಬ್ರೇಕ್ ನಂತರ ಶಿವಮಣಿ ನಿರ್ದೇಶನದ ಜೋಶ್ ಚಿತ್ರದ ಮೂಲಕ ಮತ್ತೆ ಚಿತ್ರರಂಗ ಪ್ರವೇಶಿಸಿದ್ದಾರೆ. ಅಲ್ಲದೆ, ಆಟೋ, ಸೈಲೆಂಟ್, ಸರಿಗಮ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.