ಕಿರುತೆರೆಯ ಹಾಸ್ಯ ಧಾರವಾಹಿಗೂ ಸಿಹಿಕಹಿ ಚಂದ್ರು ಅವರಿಗೂ ಬಿಡಲಾರದ ನಂಟು. ಹಲವು ಹಾಸ್ಯ ಧಾರವಾಹಿಗಳನ್ನು ನಿರ್ದೇಶಿಸಿದ ಬಳಿಕ ಕಳೆದ ವಾರವಷ್ಟೇ, ನೋಡುಗರ ಕಣ್ಣಲ್ಲಿ ನೀರು ತರಿಸುವ, ಚಿಂತನೆಗೆ ಹಚ್ಚುವ ಧಾರವಾಹಿಯನ್ನು ಸಿದ್ಧಪಡಿಸಿದ್ದರು.
MOKSHENDRA
ಇದೀಗ ಮತ್ತೆ ಹಾಸ್ಯ ಧಾರವಾಹಿಯತ್ತ ಹೊರಳಿದಿದ್ದಾರೆ. ಪತಿ-ಪತ್ನಿ ಗುಲಾಮ ಎಂಬ ಅಪ್ಪಟ ಧಾರವಾಹಿಯನ್ನು ಮಾಡಲು ಹೊರಟಿದಿದ್ದಾರೆ.
ಡಿಸೆಂಬರ್ 29ರಿಂದ ಪ್ರಸಾರವಾಗಲಿದ್ದು, ಮಾವ ಹಾಗೂ ಅಳಿಯ ಕುರಿತಾದ ಧಾರವಾಹಿ ಇದಾಗಿದೆ. ಇದರ ಪರಿಕಲ್ಪನೆಯನ್ನು ರುದ್ರೇಶ್ ನಾಗಸಂದ್ರ ಹಾಗೂ ಚಂದ್ರು ಅವರದು. ಶೀರ್ಷಿಕೆ ಗೀತೆಯನ್ನು ವಿ. ಮನೋಹರ್ ನೀಡಿದ್ದಾರೆ. ಇದರಲ್ಲಿ ಸುನೇತ್ರ ಪಂಡಿತ್, ರಾಮಮೂರ್ತಿ, ರೋಹಿಣಿ, ರಘುನಂದ ಮುಖ್ಯಪಾತ್ರದಲ್ಲಿದ್ದಾರೆ.