ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶೀಘ್ರವೇ 'ಬ್ಲ್ಯಾಕ್' ಬಿಡುಗಡೆ
ಸುದ್ದಿ/ಗಾಸಿಪ್
Feedback Print Bookmark and Share
 
ಗೆಳೆಯರ ಸಹಕಾರದಿಂದ ಬ್ಲ್ಯಾಕ್ ಚಿತ್ರ ಪೂರ್ಣಗೊಂಡಿದ್ದು, ಜನವರಿಯಲ್ಲಿ ತೆರೆ ಕಾಣಿಸುವ ಯೋಚನೆ ಇದೆ ಎಂದು ನಿರ್ದೇಶಕ ಮಹೇಂದ್ರ ಹೇಳಿದರು.

ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಮಾನ್ಸಿ ಹಾಗೂ ನಿರ್ದೇಶಕ ಮಹೇಂದ್ರ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು ಎಂದರೂ ತಪ್ಪಿಲ್ಲ.

ಮೊದಲ ಮಾತನಾಡಲು ಶುರು ಮಾಡಿದರು. ಚಿತ್ರದಲ್ಲಿ ಅನ್ಯಾಯದ ವಿರುದ್ಧ ತಿರುಗಿ ಬೀಳುವ ಪಾತ್ರ. ಒಂಥರಾ ನಕ್ಸಲೈಟ್ ಇದ್ದ ಹಾಗೆ ಎಂದಿದ್ದೇ ತಡ ನಿರ್ದೇಶಕರು ಮಧ್ಯೆ ಮಾತನಾಡಿ, ಕ್ಷಮಿಸಿ ಇದು ನಕ್ಸಲ್ ಚಿತ್ರವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ಇಲ್ಲಿ ವಿವಾದಗಳಿಗೆ ಅವಕಾಶವಿಲ್ಲ ಎಂದು ಅಲ್ಲೇ ಎಡಿಟ್ ಮಾಡಿದರು.

ಇಷ್ಟಕ್ಕೆ ನಾಯಕಿ ಸುಮ್ಮನಾಗಿಲ್ಲ. ಪೋಸ್ಟರ್‌ನಲ್ಲಿ ನಿಮ್ಮ ಪೋಟೋ ಹಾಕಿಕೊಂಡಿದ್ದೀರಿ. ನೀವು ಯಾವ ಪಾತ್ರ ಮಾಡುತ್ತಿದ್ದೀರಿ ಎಂದು ನೇರವಾಗಿ ಪ್ರಶ್ನಿಸಿದರು. ಅದಕ್ಕೆ ನಿರ್ದೇಶಕರು ನಾನು ಚಿತ್ರದ ನಿರ್ದೇಶಕ. ಅದಕ್ಕೆ ನನ್ನ ಫೋಟೋ ಹಾಕ್ಕೋಂಡಿದ್ದೀನಿ ಎಂದು ಸಮಾಜಾಯಿಷಿ ಕೊಟ್ಟರು. ಅಂತೂ ಇಂತೂ ಇವರಿಬ್ಬರ ಮಾತಿನ ಚಕಮಕಿ ಮನರಂಜನೆ ನೀಡಿದ್ದಂತೂ ಸತ್ಯ.

ಚಿತ್ರದಲ್ಲಿ ಹೊಸಮುಖಗಳೇ ಕಾಣಿಸಿಕೊಂಡಿವೆ. ತಾರಾಗಣದಲ್ಲಿ ಸುನೀಲ್, ಚೈತನ್ಯ, ಶಶಿಧರ್, ನವೀನ್ ಹಾಗೂ ಮೊಗ್ಗಿನ ಮನಸು ಚಿತ್ರದ ಮಾನಸಿ ಮುಖ್ಯಪಾತ್ರಗಳಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ಲ್ಯಾಕ್, ಮಹೇಂದ್ರ, ಮಾನಸಿ, ನಕ್ಸಲ್