ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಕ್ಷನ್ ಚಿತ್ರದತ್ತ ಶಶಾಂಕ್‌‌ ಚಿತ್ತ
ಸುದ್ದಿ/ಗಾಸಿಪ್
Feedback Print Bookmark and Share
 
ಮೊಗ್ಗಿನ ಮನಸು ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಶಶಾಂಕ್ ಈಗ ಮತ್ತೊಂದು ಚಿತ್ರ ಮಾಡಲು ಹೊರಟ್ಟಿದ್ದಾರೆ. ಆದರೆ ಈ ಬಾರಿ ತಮ್ಮ ಹಿಂದಿನ ಚಿತ್ರದಂತೆ ಪ್ರೀತಿಯ ಸೂಕ್ಷ್ಮ ಭಾವಗಳನ್ನು ಹೇಳುವುದಿಲ್ಲ. ಬದಲಾಗಿ ಆಕ್ಷನ್ ಚಿತ್ರ ಮಾಡಲು ಹೊರಟ್ಟಿದ್ದಾರೆ. ಗಾಂಧಿನಗರದಲ್ಲಿ ತಮಗೂ ಇಂತಹ ಚಿತ್ರ ಮಾಡಲೂ ಬರುತ್ತದೆ ಎಂಬುದನ್ನು ಸಾಬೀತುಪಡಿಸಬೇಕಾಗಿರುವುದರಿಂದಲೂ ಈ ಚಿತ್ರಕ್ಕೆ ಕೈ ಹಾಕಿದ್ದಾರೆ.

ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಚಿತ್ರದ ನಾಯಕನನ್ನಾಗಿ ದೀಪಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಹಿಂದೆ ಆ ದಿನಗಳು ಚಿತ್ರದಲ್ಲಿ ಬಚ್ಚನ್ ಪಾತ್ರದಲ್ಲಿ ನಟಿಸಿದ್ದರು. ನಾಯಕಿ ಇನ್ನೂ ಆಯ್ಕೆಯಾಗಿಲ್ಲ. ಬಾಲಿವುಡ್‌‌ನ ನಾಯಕಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಈ ಚಿತ್ರಕಥೆಯನ್ನು ಶಶಾಂಕ್ ಎಂಟು ವರ್ಷಗಳ ಹಿಂದೆಯೇ ಸಿದ್ಧಪಡಿಸಿದ್ದರಂತೆ.

ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹಿಂದೆ ಮುಂಗಾರು ಮಳೆ ಹಾಗೂ ಮೊಗ್ಗಿನ ಮನಸು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಂಗಾಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರೀತಿಯ ಹಿಂದೆ ಭೂಗತ ಲೋಕದ ಛಾಯೆಯನ್ನು ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರೆ. ಮೊಗ್ಗಿನ ಮನಸಿನ ಮೂಲಕ ಹುಡುಗಿಯರ ಮನಸಿನ ತುಮುಲವನ್ನು ಬಿಂಬಿಸಿ ಯಶಸ್ವಿಯಾದ ಶಶಾಂಕ್ ಈ ಬಾರಿ ಏನಾಗುತ್ತಾರೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಶಾಂಕ್, ಗಾಂಧಿನಗರ, ದೀಪಕ್, ಬಚ್ಚನ್