ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೌರವ್ 'ನೀ ಬಂದು ನಿಂತಾಗ'
ಸುದ್ದಿ/ಗಾಸಿಪ್
Feedback Print Bookmark and Share
 
ಸೌರವ್ ಅಭಿನಯದ 'ನೀ ಬಂದು ನಿಂತಾಗ' ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಶೇಖರ್ ಸಿ ಶರವಣನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬಿ.ಎಲ್. ಇಂದ್ರಜಿತ್ ಸಂಗೀತ ನೀಡಿದ್ದಾರೆ.


ನಾಯಕ ಸೌರವ್ ಎಸ್. ಗೋವಿಂದು ನಿರ್ದೇಶನದ ಜೂಟ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದಾರೆ. ಚಿತ್ರದ ಹಾಡುಗಳು ಪ್ರೇಕ್ಷಕರ ಗಮನ ಸೆಳೆಯಿತ್ತಾದರೂ ಚಿತ್ರ ಮಾತ್ರ ಗೆಲ್ಲಲಿಲ್ಲ, ಅನಂತರ ಸೌರವ್ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದರೂ ಆ ಚಿತ್ರವೂ ಸೋತಿತು. ನಂತರ ಇವರು ಕೆಲವು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದರು. ವೀರಪ್ಪನಾಯಕ ಚಿತ್ರದಲ್ಲಿ ಸೌರವ್, ವಿಷ್ಣುವರ್ಧನ್ ಅವರ ದೇಶದ್ರೋಹಿ ಮಗನಾಗಿ ಕಾಣಿಸಿಕೊಂಡಿದ್ದರು. ಗಜದಲ್ಲಿ ದರ್ಶನ್ ಸ್ನೇಹಿತರಾಗಿ ನಟಿಸಿದ್ದರು.

ನವಗ್ರಹ ಚಿತ್ರದಲ್ಲಿ ಸೌರವ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರ ಈಗ 50 ದಿನಗಳತ್ತ ಮುನ್ನುಗ್ಗುತ್ತಿದೆ. ಈಗ ನೀ ಬಂದು ನಿಂತಾಗ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರ ಬ್ರೇಕ್ ನೀಡಿದರೆ ಮುಂದೆ ಪರಿಪೂರ್ಣ ನಾಯಕರಾಗಿ ಇನ್ನಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬುದು ಅವರ ಆಸೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೌರವ್, ನೀ ಬಂದು ನಿಂತಾಗ, ಇಂದ್ರಜಿತ್, ಶೇಖರ್ ಸಿ ಶರವಣನ್, ಜೂಟ್