ನಟಿ ಸೋನು ಈವರೆಗೆ ನಟಿಸಿದ್ದು ಬರೀ ಎರಡೇ ಚಿತ್ರಗಳಲ್ಲಿ. ಅದು 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ನಾಯಕಿಯಾಗಿ ಹಾಗೂ ಪರಮೇಶ ಪಾನ್ವಾಲಾ' ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿ ನಟಿಸಿದ್ದರು. ಆದರೆ ಈಕೆಯ ಅಭಿನಯವನ್ನು ಜನ ಮೆಚ್ಚಿದ್ದಾರೆ.
MOKSHENDRA
ಒಮ್ಮೆ ನಾಯಕಿಯಾಗಿ ಕಾಣಿಸಿಕೊಂಡ ನಂತರ ಮತ್ತೆ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾಯಕಿಯರು ಹಿಂಜರಿಯುತ್ತಾರೆ. ಆದರೆ ಸೋನು ಮಾತ್ರ ಇದಕ್ಕೆ ಹೊರತು. ಪರಮೇಶ ಪಾನ್ವಾಲಾ ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಪಾತ್ರ ತನಗೆ ಮುಖ್ಯವೇ ಹೊರತು, ನಾಯಕಿಯೇ ಆಗಬೇಕೆಂಬ ಆಕ್ಷೇಪವಿಲ್ಲ ಎಂಬುದು ಆಕೆಯ ವಿವರ.
ಸೋನುಗೆ ತಮಿಳಿನಲ್ಲೂ ಈಗ ಅವಕಾಶಗಳು ಸಿಗುತ್ತಿವೆ. ನಟ ಮುರಳಿಯ ಮಗ ಮೊತ್ತ ಮೊದಲಿಗೆ ತೆರೆಗೆ ಪರಿಚಯವಾಗುತ್ತಿರುವ ಆನಂದಂ ಆರಂಭಂ ಚಿತ್ರದಲ್ಲಿ ಸೋನು ನಾಯಕಿ. ಈಗಾಗಲೇ ಚಿತ್ರದ ಮುಹೂರ್ತವಾಗಿದೆ. ತಮಿಳಿನ ಚಿತ್ರ ಹಿಟ್ ಆದರೆ ಸೋನುಗೆ ಕನ್ನಡದಲ್ಲಿ ಬೇಡಿಕೆ ಹೆಚ್ಚಬಹುದು. ಯಾಕೆಂದರೆ ಗಾಂಧಿನಗರಕ್ಕೆ ಹಿತ್ತಲ ಗಿಡ ಮದ್ದಲ್ಲ.