ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಶಸ್ವಿ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
2008ರಲ್ಲಿ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ಮಾಪಕರಾಗಿ ಗೆದ್ದಿದ್ದಾರೆ. ಅವರು ಸಹನಿರ್ಮಾಪಕರಾಗಿದ್ದ ಉಪೇಂದ್ರರ 'ಬುದ್ದಿವಂತ' ಬಾಕ್ಸ್ ಆಫೀಸಿನಲ್ಲಿ ದುಡ್ಡು ದೋಚಿದೆ. ಸದ್ಯಕ್ಕೀಗ ಅವರ ಬ್ಯಾನರ್‌ನ ಎರಡು ಚಿತ್ರಗಳು ಬಿಡುಗಡೆಗೆ ಕಾದಿವೆ. 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಮತ್ತು 'ತಿಪ್ಪಾರಳ್ಳಿ ತರಲೆಗಳು'.

ಜನವರಿಯಲ್ಲಿ ತೆರೆಕಾಣುವ ಸೂಚನೆಯಿದೆ. ಅದ್ದೂರಿ ಬಜೆಟ್‌ನ 'ಭೀಮೂಸ್.. 'ಚಿತ್ರದ ಗ್ರಾಫಿಕ್ ಕೆಲಸಗಳೆಲ್ಲಾ ಪೂರ್ಣಗೊಂಡಿದ್ದು, ಆದಷ್ಟು ಶಿಘ್ರ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ. ಸಿಂಗ್ ಬಾಬು ಸದ್ಯ ಪುತ್ರ ಆದಿತ್ಯರಿಗಾಗಿ ನಿರ್ಮಿಸಿ, ನಿರ್ದೇಶಿಸುತ್ತಿರುವ 'ರಕ್ತಾಕ್ಷ' ಚಿತ್ರೀಕರಣದಲ್ಲಿದ್ದಾರೆ.

ತಮ್ಮ ಬ್ಯಾನರ್‌ನ ಎರಡು ಚಿತ್ರಗಳು ಬಿಡುಗಡೆಯಾದ ನಂತರ 'ರಕ್ತಾಕ್ಷ' ಚಿತ್ರೀಕರಣ ಚುರುಕಾಗಲಿದೆ ಎನ್ನುತ್ತಾರೆ. ಅದ್ದೂರಿ ಬಜೆಟ್‌ನ ಈ ಚಿತ್ರಕ್ಕೆ ಈಗಾಗಲೇ ಶೇ 30ರಷ್ಟು ಚಿತ್ರೀಕರಣ ನಡೆದಿದೆ. ಬೆಂಗಳೂರಿನ ಸುತ್ತಮುತ್ತ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ನೈಸ್ ರಸ್ತೆಯಲ್ಲಿ ಚಿತ್ರಿಸಿರುವ ಕಾರ್ ಚೇಸ್‌ನ ಅದ್ದೂರಿ ದೃಶ್ಯವೊಂದಕ್ಕೆ 30 ಲಕ್ಷ ವ್ಯಯಿಸಲಾಗಿದೆ ಎನ್ನುವುದು ವಿಶೇಷ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿ ರಾಜೇಂದ್ರ ಸಿಂಗ್ ಬಾಬು, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ತಿಪ್ಪಾರಳ್ಳಿ ತರಲೆಗಳು, ರಕ್ತಾಕ್ಷ