ದುಬೈ ಬಾಬುಗೆ ರೆಕಾರ್ಡಿಂಗ್

ಅಪಾರವೆಚ್ಚದಲ್ಲಿ ಮೂಡಿಬರುತ್ತಿರುವ ದುಬೈ ಬಾಬು ಚಿತ್ರಕ್ಕೆ ಇದೀಗ ಮಾತಿನ ಜೋಡಣೆ ಕಾರ್ಯ ಪ್ರಾರಂಭವಾಗಿದೆ. ಅದ್ದೂರಿತನಕ್ಕೆ ಮತ್ತೊಂದು ಹೆಸರಾಗಿರುವ ಶೈಲೇಂದ್ರ ಬಾಬು ಇದರ ನಿರ್ಮಾಪಕರು. ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಸೂಪರ್‌ಸ್ಟಾರ್ ಉಪೇಂದ್ರ ನಾಯಕ. ಬುದ್ದಿವಂತ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ನಿಖಿತಾ ಹಾಗೂ ಸಲೋನಿ ಎಂಬ ಬೆಡಗಿಯರಿದ್ದಾರೆ. ಹಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ನಟ ಕುಮಾರ್ ಗೋವಿಂದ್ ಈ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ವಿದೇಶ ಹಾಗೂ ಮುಂಬೈನಲ್ಲೂ ಬಹುತೇಕ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ನಾಗಣ್ಣ ಅವರ ಚಿತ್ರಕತೆ, ನಿರ್ದೇಶನವಿದೆ.