ರವಿಶಂಕರ್ ಮತ್ತು ವಿಜಯ್ ಪ್ರಸಾದ್ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಒಂದು ಕಾಲಕ್ಕೆ ಇಬ್ಬರೂ ಜೊತೆಗೂಡಿ ಸಿಲ್ಲಿ ಲಲ್ಲಿ ಧಾರವಾಹಿ ಮೂಲಕ 500ಕ್ಕೂ ಹೆಚ್ಚು ದಿನಗಳ ಕಾಲ ಕನ್ನಡಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು.
ಬಳಿಕ ಧಾರವಾಹಿಯಿಂದ ಹೊರಬಂದ ರವಿಶಂಕರ್ ಬೆಳ್ಳಿತೆರೆಯಲ್ಲಿ ಪಯಣ ಬೆಳಸಿದರು. ಇತ್ತ ವಿಜಯ್ ಪ್ರಸಾದ್ ಚಿತ್ರ ಮಾಡುವುದಕ್ಕೆ ಯೋಚಿಸಿದರು. ಈಗ ಕಾಮಿಡಿ ಚಿತ್ರವೊಂದರಲ್ಲಿ ಇವರಿಬ್ಬರು ಮತ್ತೆ ಒಂದಾಗಲಿದ್ದಾರೆ. ವಿಜಯಪ್ರಸಾದ್, ರವಿಶಂಕರ್‌ರನ್ನು ಮತ್ತೆ ನಿರ್ದೇಶಿಸಲಿದ್ದಾರೆ. ಚಿತ್ರದ ಹೆಸರು ಇನ್ನು ಅಂತಿಮಗೊಂಡಿಲ್ಲ.
ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನು ಅಂತಿಮಗೊಂಡಿಲ್ಲ. ಅಲ್ಲದೆ, ತಂತ್ರಜ್ಞರ ಆಯ್ಕೆ ಇನ್ನೂ ಆಗಬೇಕಿದೆ. ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.